DAKSHINA KANNADA
ಕಟೀಲು ದೇವಿಗೆ ಮತ್ತೆ ಅವಮಾನ,ಆಗಬೇಕಿದೆ ಜಬ್ಬಾರ್ ಮಂಗಳೂರು ಎಂಬ ಮತಿಗೆಟ್ಟವನ ಬಂಧನ
ಕಟೀಲು ದೇವಿಗೆ ಮತ್ತೆ ಅವಮಾನ,ಆಗಬೇಕಿದೆ ಜಬ್ಬಾರ್ ಮಂಗಳೂರು ಎಂಬ ಮತಿಗೆಟ್ಟವನ ಬಂಧನ
ಮಂಗಳೂರು, ನವಂಬರ್ 01: ಕಟೀಲು ದುರ್ಗಾಪರಮೇಶ್ವರಿ ದೇವಿ ಮತ್ತೆ ಕಾಮಾಂಧರ, ವಿಕೃತ ಮನಸ್ಸುಗಳಿಗೆ ಆಹಾರವಾಗಿದ್ದಾಳೆ.
ಜಬ್ಬಾರ್ ಮಂಗಳೂರು ಎನ್ನುವ ಹೆಸರಿನಿಂದ ನಿರ್ವಹಿಸಲ್ಪಡುವ ಫೇಸ್ ಬುಕ್ ಪೇಜ್ ನಲ್ಲಿ ರಾಮ, ಸೀತೆ, ಕಟೀಲು ದುರ್ಗಾಪರಮೇಶ್ವರಿ, ಸ್ವಾಮಿ ಕೊರಗಜ್ಜ ಹೀಗೆ ಎಲ್ಲಾ ಹಿಂದೂ ದೇವಿ-ದೇವರುಗಳ ವಿರುದ್ಧ ಅಸಹ್ಯಕರ ಹಾಗೂ ವಿಕೃತ ಪೋಸ್ಟ್ ಗಳನ್ನು ಹಾಕಲಾಗಿದೆ.
ಈ ಹಿಂದೆಯೂ ಇಂಥಹುದೇ ಅನಾಗರಿಕ ಪೋಸ್ಟ್ ಗಳನ್ನು ಹಾಕಿದ್ದ ಬಿ.ಸಿ.ರೋಡ್ ನ ಜಬ್ಬಾರ್ ಎನ್ನುವ ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಕಟೀಲು ದುರ್ಗಾಪರಮೇಶ್ವರಿ ದೇವಿಯ ಬಗ್ಗೆ ಅವಹೇಳನಕಾರಿಯಾಗಿ ಕಮೆಂಟ್ ಗಳನ್ನು ಹಾಕಲಾಗಿತ್ತು.
ಇದರಿಂದ ಕೆರಳಿದ ಹಿಂದೂ ಸಮಾಜ ಹಲವು ರೀತಿಯ ಪ್ರತಿಭಟನೆಗಳ ಮೂಲಕ ಆರೋಪಿಯ ಬಂಧನಕ್ಕೆ ಒತ್ತಾಯಿಸಿತ್ತು.
ಇದರಿಂದ ವಿಚಲಿತಗೊಂಡ ಪೋಲೀಸರು ಆ ಫೇಸ್ ಬುಕ್ ಖಾತೆಯ ಸೂತ್ರದಾರರಾದ ಡರ್ವೀಜ್ ಮೊಹಿದೀನ್ ಹಾಗೂ ಶಫಿ.ಬಿ.ಎಂ ಎಂಬ ಇಬ್ಬರನ್ನು ಬಂಧಿಸಿದ್ದರು.
ಈ ಘಟನೆಗಳು ಮಾಸುವ ಮೊದಲೇ ಇದೀಗ ಮತ್ತೊಂದು ಜಬ್ಬಾರ್ ಮಂಗಳೂರು ಎನ್ನುವ ಫೇಸ್ಪುಕ್ ಖಾತೆಯಲ್ಲಿ ಮತ್ತೆ ದೇವಿ ದುರ್ಗಾಪರಮೇಶ್ವರಿ, ಸ್ವಾಮಿ ಕೊರಗಜ್ಜ, ಶ್ರೀರಾಮ ಹಾಗೂ ಸೀತಾ ದೇವಿಯನ್ನು ಅಶ್ಲೀಲ ಪದಗಳ ಮೂಲಕ ಅವಹೇಳನಕಾರಿಯಾಗಿ ಬಿಂಬಿಸಿದ್ದಾನೆ.
ಈ ವ್ಯಕ್ತಿ ಇದೀಗ ತನ್ನ ಖಾತೆಯನ್ನು ಡಿಲೀಟ್ ಮಾಡಿದ್ದರೂ, ಈತನ ಕಮೆಂಟ್ ಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕಳೆದ ಹಲವು ವರ್ಷಗಳಿಂದ ಕೆಲವು ಮತಿಗೆಟ್ಟ ಯುವಕರ ತಂಡ ಇಂಥಹ ಫೇಸ್ಪುಕ್ ಖಾತೆಗಳನ್ನು ತೆರೆದು ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ.
ಮಂಗಳೂರು ಮುಸ್ಲಿಂ ಎನ್ನುವ ಫೇಸ್ಬುಕ್ ಪೇಜ್ ಕೂಡಾ ಇಂಥಹುದೇ ಅನಾಗರಿಕ ವರ್ತನೆಯಲ್ಲಿ ತೊಡಗಿಕೊಂಡಿದ್ದು, ಇದರ ಬಗ್ಗೆ ಗಮನ ಹರಿಸುವಂತೆ ಪೋಲೀಸ್ ಇಲಾಖೆಗೆ ದೂರು ನೀಡಿದ್ದರೂ, ಇಂದಿನವರೆಗೂ ಇದಕ್ಕೆ ಕಡಿವಾಣ ಹಾಕಲು ಮಾತ್ರ ಸಾಧ್ಯವಾಗಿಲ್ಲ.
ಮುಖ್ಯಮಂತ್ರಿಯೋ, ಅಥವಾ ಇನ್ಯಾವನೋ ಬಗ್ಗೆ ಬರೆದಾಗ ಪೋಲೀಸ್ ಠಾಣೆಗೆ ದೂರು ನೀಡಲು ಲೈನ್ ನಲ್ಲಿ ನಿಲ್ಲುವ ಸಂಘಟನೆಗಳು ಹಾಗೂ ಪಕ್ಷಗಳು ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಬರೆದಾಗ ಮಾತ್ರ ಕಣ್ಮರೆಯಾಗುತ್ತಿದೆ.
ಕಡಬದಲ್ಲಿ ವ್ಯಕ್ತಿಯೊಬ್ಬ ಮಕ್ಕಾ ಮಸೀದಿ ಚಿತ್ರದಲ್ಲಿ ಹನುಮಂತ ದೇವರ ಚಿತ್ರ ಪ್ರಕಟಿಸಿರುವುದನ್ನು ವಿರೋಧಿಸಿ ಪೋಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಸಮಾಜದ ಸ್ವಾಸ್ಥ್ಯ ಕಾಪಾಡುವ ಮಾತನಾಡಿದ ಕೆಲವು ಜನರನ್ನು ಇದೀಗ ಟಾರ್ಚ್ ಹಿಡಿದು ಹುಡುಕುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಎಲ್ಲರಿಗೂ ಅವರವರ ದೇವರು, ಧರ್ಮ ಶ್ರೇಷ್ಠವಾಗಿರುವಾಗ ಇಂಥಹ ಅನಾಗರಿಕ ವರ್ತನೆಯನ್ನು ತೋರುವ ವ್ಯಕ್ತಿಗಳ ವಿರುದ್ಧ ಸಮಾಜವೇ ಮುಂದೆ ನಿಂತು ಹೋರಾಡಬೇಕಿದೆ.
ಅದನ್ನು ಬಿಟ್ಟು ಬರೆದವ ನನ್ನ ಧರ್ಮದವ, ನನ್ನ ಪಕ್ಷದವ ಎಂದು ತಾರತಮ್ಯ ನಡೆಸಿದ್ದಲ್ಲಿ ಮುಂದೆ ನಡೆಯುವ ಅನಾಹುತಗಳಿಗೆ ಇಡೀ ಸಮಾಜವೇ ಉತ್ತರದಾಯಿತ್ವವಾಗಲಿದೆ.