Connect with us

    LATEST NEWS

    ಓಮನ್ – ಸಮುದ್ರ ಪಾಲಾದ ಉಳ್ಳಾಲದ ಇಬ್ಬರು ಯವಕರು

    ಓಮನ್ : ಓಮನ್ ಸಮುದ್ರದಲ್ಲಿ ಈಜಲು ತೆರಳಿದ್ದ ಉಳ್ಳಾಲದ ಌಬ್ಬರು ಯುವಕರು ನೀರುಪಾಲಾದ ಘಟನೆ ನಡೆದಿದ್ದು, ಓರ್ವನ ಮೃತದೇಹ ಪತ್ತೆಯಾಗಿದ್ದು, ಮತ್ತೋರ್ವನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.


    ಉಳ್ಳಾಲದ ರಿಜ್ವಾನ್ ಅಲೆಕಳ , ಹಾಗೂ ಉಳ್ಳಾಲದ ಕೋಡಿ ಜಹೀರ್ ಮೃತಪಟ್ಟವರು. ಇವರು ಓಮನ್ ನಲ್ಲಿ ಫಿಶ್ ಮಿಲ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ಅವರು ಕಡಲತೀರಕ್ಕೆ ಶುಕ್ರವಾರ ಸಂಜೆ ವೇಳೆ ವಿಹಾರಕ್ಕೆಂದು ತೆರಳಿದ್ದರು. ರಿಜ್ವಾನ್ ನೀರಿನಲ್ಲಿ ಮುಳುಗುತ್ತಿದ್ದಾಗ ಜಹೀರ್ ಆತನನ್ನು ಉಳಿಸಲು ಧಾವಿಸಿದ್ದರು. ಜಹೀರ್ ಅವರ ಮೃತದೇಹ ಪತ್ತೆಯಾಗಿದ್ದು, ರಿಜ್ವಾನ್ ಗಾಗಿ ಹುಡುಕಾಟ ಮುಂದುವರೆದಿದೆ.

    ಮೃತ ಜಹಿರ್ ಗೆ ಈಗಾಗಲೇ ಮದುವೆ ನಿಶ್ಚಯವಾಗಿದ್ದು ಕೆಲವೇ ದಿನಗಳಲ್ಲಿ ಊರಿಗೆ ಆಗಮಿಸುವರಿದ್ದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *