Connect with us

    LATEST NEWS

    ತಮ್ಮದೇ ಟ್ರೋಲ್ ಪೋಟೋವನ್ನು ಜಾಲತಾಣದಲ್ಲಿ ಹಂಚಿಕೊಂಡ ಸಂಸದ ಶಶಿತರೂರ್

    ಕೇರಳ ಅಗಸ್ಟ್ 28: ಇತ್ತೀಚೆಗೆ ಓಣಂ ಸಂದರ್ಭ ದೇವಸ್ಥಾನವೊಂದರಲ್ಲಿ ಕಾಂಗ್ರೇಸ್ ಸಂಸದ ಶಶಿತರೂರ್ ಹಿಡುಗಾಯಿ ಹೊಡೆಯುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಮಾಡಲಾಗಿದ್ದು, ಟ್ರೋಲ್ ಆದ ಪೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸ್ವತಃ ಶಶಿ ತರೂರ್​ ಅವರು ಹಂಚಿಕೊಂಡಿದ್ದಾರೆ.

    ನಾಣು ತೆಂಗಿನಕಾಯಿಯನ್ನು ಶಾಸ್ತ್ರೀಯವಾಗಿ ಒಡೆಯುವ ಚಿತ್ರವನ್ನು ಬಳಸಿ ಈ ಮೀಮ್ಸ್​ಗಳನ್ನು ಹರಿಬಿಡಲಾಗಿದೆ. ಈ ಫೋಟೋಗಳನ್ನು ಯಾರು ಹರಿಬಿಟ್ಟಿದ್ದಾರೋ ನನಗೆ ಗೊತ್ತಿಲ್ಲ. ಆದರೆ, ನೋಡಲು ತುಂಬಾ ತಮಾಷೆಯಾಗಿವೆ. ವೈರಲ್​ ಆಗಿರುವ ಫೋಟೋಗಳಲ್ಲಿ ಇವು ನನ್ನ ಕೆಲವು ಮೆಚ್ಚಿನವುಗಳು ಎಂದು ಶಶಿ ತರೂರ್​ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

    ಅಂದಹಾಗೆ ತರೂರ್​ ಅವರು ಹಿಡುಗಾಯಿ ಒಡೆಯುತ್ತಿರುವ ಫೋಟೋವನ್ನು ಟೀ ತಯಾರಕ, ಡ್ಯಾನ್ಸರ್​, ಬೌಲರ್​, ಕುಸ್ತಿಪಟು ಹಾಗೂ ಜಾವೆಲಿನ್​ ಥ್ರೂ ನಿರಜ್​ ಚೋಪ್ರಾ ರೀತಿ ಮೀಮ್ಸ್​ ಮಾಡಿ ಹರಿಬಿಟ್ಟಿದ್ದಾರೆ.

    ಮೀಮ್ಸ್​ ಫೋಟೋಗಳನ್ನು ಸ್ವಲ್ಪವೂ ಸಂಕೋಚ ಪಟ್ಟುಕೊಳ್ಳದೇ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿರುವ ಶಶಿ ತರೂರ್​ ಅವರ ಕ್ರೀಡಾ ಮನೋಭಾವ ಹಾಗೂ ಹಾಸ್ಯ ಪ್ರಜ್ಞೆಗೆ ನೆಟ್ಟಿಗರು ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೇ ಮೀಮ್ಸ್​ಗಳನ್ನು ಮಾಡಿರುವ ಟ್ರೋಲಿಗರು ಸೃಜನಾತ್ಮಕತೆಗೂ ಬಹುಪರಾಕ್​ ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply