LATEST NEWS
ಒಲಿಂಪಿಕ್ ಸ್ಪೋರ್ಟ್ಸ್ ನವೀಕೃತ ನೂತನ ಮಳಿಗೆ ಶುಭಾರಂಭ
ಮಂಗಳೂರು ಫೆಬ್ರವರಿ 26: ಮಂಗಳೂರಿನ ಹೆಸರಾಂತ ಒಲಿಂಪಿಕ್ ಸ್ಪೋರ್ಟ್ಸ್ ನವೀಕೃತ ನೂತನ ಮಳಿಗೆ ಮಂಗಳೂರಿನಲ್ಲಿ ಶುಭಾರಂಭಗೊಂಡಿದೆ.
ಕಳೆದ ಹನ್ನೆರಡು ವರ್ಷಗಳಿಂದ ದಕ್ಷಿಣ ಕನ್ನಡ, ಉಡುಪಿ, ಕುಂದಾಪುರದಲ್ಲಿ ಕ್ರೀಡಾ ಸಲಕರಣೆಗಳ ಮಾರಟದಲ್ಲಿ ಗುಣಮಟ್ಟದ ಸೇವೆ ನೀಡುತ್ತಿರುವ ಒಲಿಂಪಿಕ್ ಸ್ಪೋರ್ಟ್ಸ್ ಇದೀಗ ತನ್ನ ಪ್ರಧಾನ ನವೀಕೃತ ಶಾಖೆಯನ್ನು ಮಂಗಳೂರು ನಗರದ ಹೃದಯ ಭಾಗದ ಸರ್ವಿಸ್ ಬಸ್ ನಿಲ್ದಾಣ ಮುಂಭಾಗದ ವಿಜಯದೀಪ್ ಆರ್ಕೇಡ್ ಕಟ್ಟಡದಲ್ಲಿ ಪ್ರಾರಂಭಿಸಿದೆ. ನವೀಕೃತ ನೂತನ ಒಲಿಂಪಿಕ್ ಸ್ಪೋರ್ಟ್ಸ್ ಮಳಿಗೆಗೆ ಭಾರತದ ಮಾಜಿ ಹಾಕಿ ಕಪ್ತಾನ, ಅರ್ಜುನ ಮತ್ತು ಪದ್ಮಶ್ರೀ ಪ್ರಶಸ್ತಿಯನ್ನು ಪುರಸ್ಕೃತ ಧನ್ರಾಜ್ ಪಿಳ್ಳೆ, ಭಾರತದ ಮಾಜಿ ಹಾಕಿ ಆಟಗಾರ ಲೇನ್ ಅಯ್ಯಪ್ಪ ಸೇರಿ ಚಾಲನೆ ನೀಡಿ ಶುಭ ಹಾರೈಸಿದರು.
ಇನ್ನೂ ನವೀಕೃತ ನೂತನ ಒಲಿಂಪಿಕ್ ಸ್ಪೋರ್ಟ್ಸ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್ ಶಮೀರ್ ಖಾದರ್ ಮಾತನಾಡಿ ಕಳೆದ ಹನ್ನೆರಡು ವರ್ಷಗಳಿಂದ ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಯೂ ಗುಣಮಟ್ಟದ ಸೇವೆಯನ್ನು ಸಂಸ್ಥೆಯ ನಿರ್ದೇಶಕರಾದ ಮಹಮ್ಮದ್ ಶರೀಫ್ , ನಿಝಾಮುದ್ದೀನ್ ಅಬ್ದುಲ್ ಖಾದರ್ ಟಿ. ಸಹಕಾರದೊಂದಿಗೆ ನಡೆಸಿಕೊಂಡು ಬಂದಿದ್ದು…ಒಲಂಪಿಕ್ ಸ್ಪೋರ್ಟ್ಸ್ ನಲ್ಲಿ ಕಷ್ಟಮೈಸ್ ಜರ್ಸಿ, ಟ್ರೋಫಿಗಳು ಸೇರಿದಂತೆ ಅತ್ಯಾಕರ್ಷಕ ಶೈಲಿಯ ಗುಣಮಟ್ಟದ ಕ್ರೀಡಾ ಸಲಕರಣೆಗಳು ಸಂಸ್ಥೆಯಲ್ಲಿದೆ.
ಜನರು ಈ ಸಂಸ್ಥೆಗೆ ಇನ್ನಷ್ಟು ಸಹಕಾರ ನೀಡಬೇಕೆಂದರು. ಒಟ್ಟಿನಲ್ಲಿ ಮಂಗಳೂರಿಗೆ ಕಳೆದ ಹನ್ನೆರಡು ವರ್ಷಗಳಲ್ಲಿ ಒಲಿಂಪಿಕ್ ಸ್ಪೋರ್ಟ್ಸ್ ನೀಡಿದ ಸೇವೆ ಅಮೋಘವಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಸೇವೆ ನೀಡುವಂತಾಗಲಿ.