Connect with us

    LATEST NEWS

    ಮೂಡಬಿದಿರೆ – ನಾಪತ್ತೆಯಾದ ವಿಧ್ಯಾರ್ಥಿನಿ ಅದಿರಾ ಕೇರಳದಲ್ಲಿ ಪ್ರಿಯಕರನೊಂದಿಗೆ ಪತ್ತೆ…!!

    ಮೂಡಬಿದಿರೆ ಫೆಬ್ರವರಿ 26: ಕಾಲೇಜಿಗೆಂದು ಹೊರಟು ನಾಪತ್ತೆಯಾಗಿದ್ದ ಮೂಡಬಿದಿರೆಯ ಖಾಸಗಿ ಕಾಲೇಜಿವ ವಿಧ್ಯಾರ್ಥಿನಿ ಅದಿರಾ ಇದೀಗ ಕೇರಳದಲ್ಲಿ ಪತ್ತೆಯಾಗಿದ್ದು, ತನ್ನ ಪ್ರಿಯಕರನೊಂದಿಗೆ ಮದುವೆ ಆಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.


    ಮೂಡುಬಿದಿರೆಯ ಆಳ್ವಾಸ್‌ ವಿದ್ಯಾಸಂಸ್ಥೆಯ ಬಿ.ಪಿ.ಟಿ. ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿರುವ 19 ವರ್ಷದ ಅದಿರಾ ಮೂಲತಹ ಉಡುಪಿ ಜಿಲ್ಲೆಯ ಕೊಲ್ಲೂರಿನ ನಿವಾಸಿ. ಫೆಬ್ರವರಿ 23ರ ಶುಕ್ರವಾರ ಬೆಳಿಗ್ಗೆ 7.45 ಕ್ಕೆ ಹಾಸ್ಟೆಲ್‌ನಿಂದ ಆಳ್ವಾಸ್‌ ಬಸ್‌ನಲ್ಲಿ ಬಂದಿದ್ದು, ನಂತರ ಮೂಡುಬಿದಿರೆ ಕನ್ನಡಭವನದ ಬಳಿ ಇಳಿದು ಹೋದ ಈಕೆ ಕಾಲೇಜಿಗೆ ಹೋಗದೆ, ಹಾಸ್ಟೆಲ್‌, ಮನೆಗೂ ಹೋಗದೆ ದಿಢೀರ್‌ ನಾಪತ್ತೆಯಾಗಿದ್ದಳು. ಈ ಬಗ್ಗೆ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
    ಇದೀಗ ಬಂದ ಮಾಹಿತಿ ಪ್ರಕಾರ ಅದಿರಾ ಕೇರಳಕ್ಕೆ ತೆರಳಿ ತನ್ನ ಪ್ರಿಯಕರನನ್ನು ಮದುವೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply