Connect with us

LATEST NEWS

ಕೊರೊನಾಗೆ ಬಲಿಯಾದ ಫ್ಲೈಯಿಂಗ್ ಸಿಖ್ ಖ್ಯಾತಿಯ ಅಥ್ಲೀಟ್ ಮಿಲ್ಕಾ ಸಿಂಗ್

ಚಂಡೀಗಡ: ಕೊರೊನಾದಿಂದ ಬಳಲುತ್ತಿದ್ದ ದೇಶದ ಖ್ಯಾತ ಕ್ರಿಡಾಪಟು ‘ಫ್ಲೈಯಿಂಗ್ ಸಿಖ್‘ ಖ್ಯಾತಿಯ ಅಥ್ಲೀಟ್ ಮಿಲ್ಕಾ ಸಿಂಗ್ (91) ಶುಕ್ರವಾರ ತಡರಾತ್ರಿ ನಿಧರಾಗಿದ್ದಾರೆ. ಸುಮಾರು ಒಂದು ತಿಂಗಳ ಕಾಲ ಕೊರೋನಾ ವಿರುದ್ಧದ ಹೋರಾಟ ನಡೆಸಿದ್ದ ಮಿಲ್ಖಾ ಸಿಂಗ್ ಕೊನೆಗೂ ಗೆಲ್ಲಲಿಲ್ಲ.


ಕೋವಿಡ್‌ ಸೋಂಕಿಗೊಳಗಾಗಿದ್ದ ಅವರು ಇಲ್ಲಿಯ ಪಿಜಿಐಎಂಇಆರ್‌ ನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಅವರ ಪತ್ನಿ, ಭಾರತ ವಾಲಿಬಾಲ್ ತಂಡದ ಮಾಜಿ ನಾಯಕಿ ನಿರ್ಮಲ್ ಕೌರ್ ಅವರು ಈಚೆಗಷ್ಟೇ ಕೋವಿಡ್‌ನಿಂದಾಗಿ ನಿಧನರಾಗಿದ್ದರು.


1960ರ ರೋಮ್ ಒಲಿಂಪಿಕ್ಸ್‌ನ 400 ಮೀಟರ್ಸ್ ಓಟದಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದರು. 1956 ಮತ್ತು 1964ರ ಒಲಿಂಪಿಕ್ಸ್‌ನಲ್ಲಿಯೂ ಭಾರತವನ್ನು ಪ್ರತಿನಿಧಿಸಿದ್ದರು. 1958ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಏಷ್ಯನ್ ಗೇಮ್ಸ್‌ನಲ್ಲಿ ನಾಲ್ಕು ಬಾರಿ ಚಿನ್ನ ಗೆದ್ದ ಹೆಗ್ಗಳಿಕೆ ಅವರದ್ದು.

Advertisement
Click to comment

You must be logged in to post a comment Login

Leave a Reply