UDUPI
ಅಡ್ಕದಕಟ್ಟೆಯ ಬಳಿ ತ್ರಿಕೋನಾಕಾರದ ಶಾಸನ ಪತ್ತೆ.!.
ಉಡುಪಿ ಫೆಬ್ರವರಿ 20: ತ್ರಿಕೋನಾಕಾರದ ಹಳೆಯ ಶಾಸನವೊಂದು ಪತ್ತೆಯಾದ ಘಟನೆ ಉಡುಪಿ ನಿಟ್ಟೂರಿನ ಪಂಚ ಧೂಮಾವತಿ ದೈವಸ್ಥಾನದ ಬಳಿ ನಡೆದಿದೆ.
ರಸ್ತೆ ಅಗಲೀಕರಣದ ಸಂದರ್ಭ ಈ ತ್ರಿಕೋನಾಕಾರದ ಶಾಸನ ಮಣ್ಣಿನಲ್ಲಿ ಹೂತು ಹೋಗಿದ್ದು, ಅದನ್ನು ಸ್ವಚ್ಛಗೊಳಿಸಿದಾಗ ಅದರ ಮೇಲ್ಭಾಗದಲ್ಲಿ ಸೂರ್ಯ ಚಂದ್ರ. ದೊಡ್ಡ ಕಣ್ಣು ಇರುವ ಮಾನವನ ದೇಹ ಕೈಯಲ್ಲಿ ಆಯುಧಗಳು ಕಂಡು ಬಂದಿದೆ.
ಈ ಬಗ್ಗೆ ಮಾಹಿತಿ ನೀಡಿದ ಇತಿಹಾಸ ಮತ್ತು ಪುರಾತತ್ವ ಸಂಶೋಧಕರಾದ ಪ್ರೊ, ಟಿ ಮುರುಗೇಶಿ ಅವರು ಇದು ಗರಡಿ ಕಲ್ಲು ಎಂದು ತಿಳಿಸಿದ್ದಾರೆ. ಈ ಶಾಸನ ಅರ್ಧ ಕಿಲೋಮೀಟರ್ ಮುಂದಕ್ಕೆ ಚಲಿಸಿದರೆ ಮೂಡ ನಿಡಂಬೂರು ಗರಡಿಯು ಇದೆ, ಒಟ್ಟಿನಲ್ಲಿ ಗರಡಿಯಲ್ಲಿ ಅಭ್ಯಾಸ ಮಾಡುವಾಗ. ಅಥವಾ ಯುದ್ಧ ಮಾಡುವಾಗ ಯಾರಾದರೂ ವೀರಮರಣ ಹೊಂದಿದರೆ. ಅಂಥವರಿಗೆ ಇಂತಹ ಕಲ್ಲುಗಳನ್ನು ಇಟ್ಟು ನೆನಪಿಸಿಕೊಳ್ಳುತ್ತಾರೆ ಎಂದು ಪ್ರೊ, ಟಿ. ಮುರುಗೇಶೀ ತಿಳಿಸಿದ್ದಾರೆ, ಈ ಭಾಗದಲ್ಲಿ ಮತ್ತೆ ಮತ್ತೆ ವೀರಗಲ್ಲು. ಗರಡಿ ಕಲ್ಲು ಕಾಣಸಿಗುತ್ತಿರುವುದು. ಮತ್ತು ಅವುಗಳನ್ನು ಸೂಕ್ತ ರೀತಿಯಲ್ಲಿ ಅಲ್ಲಿಯೇ ಅಕ್ಕ ಪಕ್ಕದಲ್ಲಿ ಸಂರಕ್ಷಣೆ ಮಾಡುವುದು. ಸ್ಥಳೀಯರೆಲ್ಲರ ಸಹಕಾರವು ಅಗತ್ಯ ಎಂದು ಗಣೇಶ್ ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ.