LATEST NEWS
ನಿಮ್ಮ ಜೀವ ಉಳಿಬೇಕಾದ್ರೆ ನೀವೆ ರಸ್ತೆ ಹೊಂಡ ಮುಚ್ಚಿ…!!
ಮಂಗಳೂರು ಜನವರಿ 09: ಸ್ಮಾರ್ಟ್ ಸಿಟಿ ಮಂಗಳೂರಿನ ರಸ್ತೆಗಳಲ್ಲಿ ಬರೀ ಹೊಂಡಗಳದ್ದೇ ಕಾರುಬಾರು ಇದೆ. ಇದೇ ಹೊಂಡಗಳಿಗೆ ಬಿದ್ದು ಎಷ್ಟೋ ಜನರು ತಮ್ಮ ಜೀವ ಕಳೆದುಕೊಂಡಿದ್ದಾರೆ. ಆದರೂ ಜಿಲ್ಲಾಡಳಿತ ಮಾತ್ರ ಇದರ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ. ಆದರೆ ವೃದ್ದರೊಬ್ಬರು ನಂತೂರು ಬಳಿ ಇರುವ ರಸ್ತೆ ಹೊಂಡಗಳಿಗೆ ತಮ್ಮದೆ ಕಾರಿನಲ್ಲಿ ಮಣ್ಣನ್ನು ತಂದು ಹಾಕುತ್ತಿದ್ದಾರೆ.
ನಂತೂರು ರಸ್ತೆ ಅಗಲ ಮಾಡುವ ಕಾಮಗಾರಿ ವೇಗವಾಗಿ ಪ್ರಾರಂಭವಾಗಿ ಇದೀಗ ಸ್ತಬ್ದವಾಗಿದೆ, ಈಗ ಇರುವ ರಸ್ತೆಗಳಲ್ಲಿ ಬರೀ ಹೊಂಡಗಳೇ ತುಂಬಿದ್ದು, ವಾಹನ ಸವಾರರಿಗೆ ಸಂಕಷ್ಟ ತಂದೊಡ್ಡಿದೆ, ಇದೇ ರಸ್ತೆಯಲ್ಲಿ ಸಂಚರಿಸುವ ಪಾಂಡುರಂಗ ಕಾಮತ್ ಅವರು ತಮ್ಮ ಕಾರಿನಲ್ಲಿ ಮಣ್ಣನ್ನು ತಂದು ರಸ್ತೆಯ ಹೊಂಡಗಳಿಗೆ ಹಾಕಿದ್ದಾರೆ. ಜನರ ತೆರಿಗೆ ಹಣದಿಂದಲೇ ಕಾರ್ಯಭಾರ ನಡೆಸುವ ಸ್ಥಳೀಯ ಆಡಳಿತ ಮಾಡಬೇಕಾದ ಕೆಲಸವನ್ನು ಈ ವೃದ್ದರೊಬ್ಬರು ಮಾಡುತ್ತಿದ್ದಾರೆ. ಇದು ನಮ್ಮ ಸ್ಮಾರ್ಟ್ ಸಿಟಿ ಸ್ಥಿತಿ