Connect with us

LATEST NEWS

ಓಖೀ ಚಂಡಮಾರುತ ಉಡುಪಿಯಲ್ಲೂ ಹೈಅಲರ್ಟ್: ಮಲ್ಪೆ ಬೀಚಿನಲ್ಲಿ ಪ್ರವಾಸಿಗರಿಗೆ ನಿರ್ಬಂಧ

ಓಖೀ ಚಂಡಮಾರುತ ಉಡುಪಿಯಲ್ಲೂ ಹೈಅಲರ್ಟ್: ಮಲ್ಪೆ ಬೀಚಿನಲ್ಲಿ ಪ್ರವಾಸಿಗರಿಗೆ ನಿರ್ಬಂಧ

ಉಡುಪಿ, ಡಿಸೆಂಬರ್ 02 : ಓಖೀ ಚಂಡಮಾರುತ ಹಿನ್ನಲೆಯಲ್ಲಿ ಉಡುಪಿ ಕರಾವಳಿಯಲ್ಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಇಲ್ಲಿ ಮಲ್ಪೆ ಬೀಚಿನಲ್ಲಿ ಪ್ರವಾಸಿಗರಿಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ.

ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು ಹಾಗೂ ವೇಗವಾಗಿ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಯಾರು ಕೂಡ ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸಲಾಗಿದೆ.

ಸಮುದ್ರದ ಮಧ್ಯೆಯಲ್ಲಿರುವ ಪ್ರಮುಖ ಯಾತ್ರಾ ಸ್ಥಳ ಸೈಂಟ್ ಮೇರಿಸ್ ಐ ಲ್ಯಾಂಡಿಗೆ ಬೋಟ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಮೀನುಗಾರಿಕೆ ಕೂಡ ಸ್ಥಗಿತಗೊಂಡಿದ್ದು, ಮೀನುಗಾರಿಕೆಗೆ ತೆರಳದೆ ಮಲ್ಪೆ ಬಂದರಿನಲ್ಲೆ ಮೀನುಗಾರಿಕಾ ದೋಣಿಗಳು ಲಂಗರು ಹಾಕಿವೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *