LATEST NEWS
ಹುಚ್ಚ ವೆಂಕಟ್ ಮೇಲೆ ನಡು ಬೀದಿಯಲ್ಲಿ ಯುವಕನಿಂದ ಹಲ್ಲೆ
ಹುಚ್ಚ ವೆಂಕಟ್ ಮೇಲೆ ನಡು ಬೀದಿಯಲ್ಲಿ ಯುವಕನಿಂದ ಹಲ್ಲೆ
ಬೆಂಗಳೂರು, ಡಿಸೆಂಬರ್ 02 : ಸ್ಯಾಂಡಲ್ ವುಡ್ ನಟ, ಫಯರಿಂಗ್ ಸ್ಟಾರ್ ಹುಚ್ಚ ವೆಂಕಟ್ ಮೇಲೆ ಹಲ್ಲೆ ನಡೆದಿದೆ.
ಬೆಂಗಳೂರಿನ ಯಶವಂತ ಪುರದಲ್ಲಿ ಈ ಘಟನೆ ಸಂಭವಿಸಿದೆ.
ಯಶವಂತಪುರದ ಹೋಟೇಲ್ ಒಂದರಲ್ಲಿ ರಾತ್ರಿ ಊಟ ಮಾಡಿ ಮನೆಗೆ ವಾಪಸ್ಸಾಗುತ್ತಿದ್ದಾಗ ಈ ಹಲ್ಲೆ ನಡೆದಿದೆ.
ಯಶವಂತಪುರದ ನಡುಬೀದಿಯಲ್ಲಿ ಹುಚ್ಚ ವೆಂಕಟ್ ತಲೆಗೆ ಯುವಕನೊಬ್ಬ ಹೆಲ್ಮೆಟ್ ನಿಂದ ಥಳಿಸಿದ್ದಾನೆ.
ರಾತ್ರಿ ಊಟ ಮಾಡಲು ಹುಚ್ಚ ವೆಂಕಟ್ ಯಶವಂತಪುರದಲ್ಲಿರುವ ಹೋಟೆಲ್ ಒಂದಕ್ಕೆ ಹೋಗಿದ್ದಾರೆ.
ಊಟ ಮಾಡಿ ವಾಪಸ್ ಆಗುತ್ತಿದ್ದಾಗ, ದಾರಿಯಲ್ಲಿ ಹುಚ್ಚ ವೆಂಕಟನನ್ನು ನೋಡಿ ಯುವಕರು ಮಾತನಾಡಿಸಿ ಕೀಟಲೆ ಮಾಡಿದ್ದಾರೆ.
ಮಾತಿಗೆ ಮಾತು ಬೆಳೆದು ಗಲಾಟೆಗೆ ತಿರುಗಿ ಸಂದರ್ಭ ಯುವಕನೊಬ್ಬ ಕೈಯಲ್ಲಿದ್ದ ಹೆಲ್ಮೆಟ್ ನಿಂದ ಹುಚ್ಚ ವೆಂಕಟ್ ತಲೆಗೆ ಹೊಡೆದಿದ್ದಾನೆ.
ಈ ಎಲ್ಲಾ ಘಟನೆಯ ದೃಶ್ಯ ಸಮೀಪದ ಮನೆಯೊಂದರ ಸಿಸಿಟಿವಿಯಲ್ಲಿ ಸೆರೆ ಆಗಿದೆ.
ತಲೆಗೆ ಪೆಟ್ಟು ಬಿದ್ದ ಮೇಲೂ ಏನನ್ನೂ ಮಾತನಾಡದೆ ಹುಚ್ಚ ವೆಂಕಟ್ ಮನೆಗೆ ತೆರಳಿದ್ದಾರೆ.
ಈ ಎಲ್ಲಾ ಘಟನೆ ನಡೆದದ್ದು ನವೆಂಬರ್ 29 ರ ರಾತ್ರಿ. ಅದರೆ ಈ ಬಗ್ಗೆ ಇಲ್ಲಿಯವರೆಗೂ ಯಾವುದೇ ದೂರು ದಾಖಲಾಗಿಲ್ಲ.
You must be logged in to post a comment Login