LATEST NEWS
ಮಂಗಳೂರು – ನರ್ಸಿಂಗ್ ವಿಧ್ಯಾರ್ಥಿನಿ ಆತ್ಮಹತ್ಯೆ
ಮಂಗಳೂರು ಅಕ್ಟೋಬರ್ 06: ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ನರ್ಸಿಂಗ್ ಕಲಿಯುತ್ತಿರುವ ಕೇರಳ ಮೂಲದ ವಿಧ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮೃತಳನ್ನು ಕಾಸರಗೋಡಿನ ನೀನಾ(19) ಎಂದು ಗುರುತಿಸಲಾಗಿದೆ. ಈಕೆ ಕಂಕನಾಡಿಯಲ್ಲಿರುವ ಖಾಸಗಿ ಕಾಲೇಜಿನಲ್ಲಿ ಮೊದಲ ವರ್ಷದ ನರ್ಸಿಂಗ್ ಕಲಿಯುತ್ತಿದ್ದಳು.
ಹಾಸ್ಟೆಲ್ ನಲ್ಲಿ ವಾಸವಾಗಿದ್ದ ನೀನಾ ಬಾತ್ ರೂಮ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿದ್ದು, ಅದರಲ್ಲಿ ಹೆತ್ತವರಿಗೆ ಆರ್ಥಿಕವಾಗಿ ಹೊರೆಯಾಗುತ್ತಿದ್ದೆನೆ ಎಂದು ಬರೆದಿದ್ದಾಳೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋವಿಡ್-19 ಸಾಂಕ್ರಾಮಿಕದಿಂದ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಪೋಷಕರಿಗೆ ತನ್ನ ಶಿಕ್ಷಣದ ವೆಚ್ಚದೊಂದಿಗೆ ಮತ್ತಷ್ಟು ಹೊರೆಯಾಗಲು ಇಷ್ಟಪಡುವುದಿಲ್ಲ ಎಂದು ಆಕೆ ಡೆತ್ ನೋಟ್ ಬರೆದಿಟ್ಟಿದ್ದಾಳೆ.
ಖಾಸಗಿ ನರ್ಸಿಂಗ್ ಕಾಲೇಜ್ ವೊಂದರಲ್ಲಿ ಪ್ರಥಮ ವರ್ಷದ ಬಿಎಸ್ ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ, 75 ಸಾವಿರ ರೂ. ಶುಲ್ಕವನ್ನು ಪಾವತಿಸಿದ್ದಳು. ಆದರೂ, ಆಕೆಯ ಯೂನಿಫಾರಂಗಾಗಿ ಉಳಿದ ಹಣಕ್ಕಾಗಿ ಕಾಲೇಜ್ ನಿಂದ ಆಕೆಯನ್ನು ಪೀಡಿಸಲಾಗುತಿತ್ತು ಎಂಬ ವಿಚಾರ ಆಕೆ ಬರೆದಿರುವ ಡೆತ್ ನೋಟ್ ನಿಂದ ತಿಳಿದುಬಂದಿದೆ. ಈ ಘಟನೆ ಸಂಬಂಧ ಅಸ್ವಾಭಾವಿಕ ಸಾವು ವರದಿ ದಾಖಲಿಸಿಕೊಳ್ಳಲಾಗಿದೆ ಎಂದು ಮಂಗಳೂರು ಪೂರ್ವ ಪೊಲೀಸರು ತಿಳಿಸಿದ್ದಾರೆ