LATEST NEWS
ಮುಂದುವರೆದ ಕಾಂಗ್ರೇಸ್ ಭಿನ್ನಮತ ಎನ್ಎಸ್ ಯುಐ ಪದಾಧಿಕಾರಿಗಳ ರಾಜೀನಾಮೆ

ಮುಂದುವರೆದ ಕಾಂಗ್ರೇಸ್ ಭಿನ್ನಮತ ಎನ್ಎಸ್ ಯುಐ ಪದಾಧಿಕಾರಿಗಳ ರಾಜೀನಾಮೆ
ಮಂಗಳೂರು ಎಪ್ರಿಲ್ 18: ದಕ್ಷಿಣಕನ್ನಡ ಜಿಲ್ಲಾ ಯೂತ್ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ ಗೆ ಮುಲ್ಕಿ ಮೂಡಬಿದಿರೆ ಟಿಕೆಟ್ ಕೈ ತಪ್ಪಿರುವ ಹಿನ್ನಲೆಯಲ್ಲಿ ಕಾಂಗ್ರೇಸ್ ಎನ್ ಎಸ್ ಯುಐನ ದಕ್ಷಿಣಕನ್ನಡ ಜಿಲ್ಲಾ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಲಿದ್ದಾರೆ.
ಈ ಕುರಿತು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎನ್ ಎಸ್ ಯು ಐ ರಾಜ್ಯ ಕಾರ್ಯದರ್ಶಿ ರೂಪೇಶ್ ರೈ ಮೂರು ವರ್ಷಗಳ ಹಿಂದೆ ಮಿಥುನ್ ರೈ ಗೆ ಟಿಕೆಟ್ ನೀಡಲಾಗುವುದೆಂದು ಭರವಸೆಯನ್ನು ನೀಡಿದ್ದರೂ ಆದರೆ ಈಗ ಟಿಕೆಟ್ ನೀಡದೆ ಕಾಂಗ್ರೇಸ್ ಮಿಥುನ್ ರೈ ಅವರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು. ಕಾಂಗ್ರೇಸ್ ಪಕ್ಷದ ಈ ನಡೆಯಿಂದ ನೋವಾಗಿದ್ದು ಈ ಹಿನ್ನಲೆಯಲ್ಲಿ ಎನ್ ಎಸ್ ಯುಐ ನಾಯಕರು ಸಾಮೂಹಿಕ ರಾಜೀನಾಮೆ ನೀಡಲಿದ್ದೇವೆ ಎಂದು ತಿಳಿಸಿದರು. ಅಲ್ಲದೆ ಎನ್ ಎಸ್ ಯು ಐ ನ ವಿವಿಧ ಕಾಲೇಜು ಘಟಕದ ಪದಾಧಿಕಾರಿಗಳು ಕೂಡ ರಾಜೀನಾಮೆ ನೀಡಲಿದ್ದು, ಸದ್ಯದಲ್ಲೇ ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಕೆ ಮಾಡುತ್ತೇವೆ ಎಂದು ತಿಳಿಸಿದರು.

ದಕ್ಷಿಣಕನ್ನಡ ಜಿಲ್ಲಾ ಯುವಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ ಸದ್ಯ ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರು ಮುಂದಿನ ನಡೆ ಏನು ಎನ್ನುವುದು ಇನ್ನೂ ತಿಳಿದಿಲ್ಲ ಎಂದು ಹೇಳಿದ ಅವರು ಮುಂದೆ ಅವರು ಯಾವ ರೀತಿ ನಿರ್ಧಾರ ಕೈಗೊಳ್ಳುತ್ತಾರೊ ಅದಕ್ಕೆ ಬದ್ದ ಎಂದು ತಿಳಿಸಿದರು.