Connect with us

    MANGALORE

    ನಾಪತ್ತೆಯಾಗಿದ್ದ ಅಡಿಕೆ ವ್ಯಾಪಾರಿಯ ಶವ ಪತ್ತೆ

    ನಾಪತ್ತೆಯಾಗಿದ್ದ ಅಡಿಕೆ ವ್ಯಾಪಾರಿಯ ಶವ ಪತ್ತೆ

    ಮಂಗಳೂರು ಎಪ್ರಿಲ್ 18: ನಾಪತ್ತೆಯಾಗಿದ್ದ ಅಡಿಕೆ ವ್ಯಾಪಾರಿಯೊಬ್ಬರು ಮಂಗಳೂರು ಹೊರವಲಯದ ಕಾಡಿನಲ್ಲಿ ಶವವಾಗಿ ಪತ್ತೆಯಾದ ಘಟನೆ ನಡೆದಿದೆ.

    ಎಪ್ರಿಲ್ 14 ರಂದು ಅಬ್ದುಲ್ ಅಜೀಜ್ ಎಂಬ ಅಡಿಕೆ ವ್ಯಾಪಾರಿಯೊಬ್ಬರು ನಾಪತ್ತೆಯಾಗಿದ್ದರು. ಈ ಕುರಿತಂತೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಇಂದು ಕೋಣಾಜೆ ಸಮೀಪದ ತೌಡುಗೋಳಿ ಎಂಬಲ್ಲಿ ಅವರ ಶವ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಸ್ತಳಕ್ಕೆ ಕೊಣಾಜೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಮಾಡಿ‌ನೇಣು ಹಾಕಿರುವ ಶಂಕೆಯನ್ನು ವ್ಯಕ್ತಪಡಿಸಲಾಗಿದ್ದು, ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply