Connect with us

LATEST NEWS

ತೆರಿಗೆ ಪಾವತಿಸದ ಮೊಬೈಲ್ ಟವರ್ ಕಂಪೆನಿಗಳಿಗೆ ನೋಟಿಸ್ ನೀಡಿ ತೆರಿಗೆ ವಸೂಲಿ ಮಾಡಿ- ಕೋಟ ಶ್ರೀನಿವಾಸ್ ಪೂಜಾರಿ

ತೆರಿಗೆ ಪಾವತಿಸದ ಮೊಬೈಲ್ ಟವರ್ ಕಂಪೆನಿಗಳಿಗೆ ನೋಟಿಸ್ ನೀಡಿ ತೆರಿಗೆ ವಸೂಲಿ ಮಾಡಿ- ಕೋಟ ಶ್ರೀನಿವಾಸ್ ಪೂಜಾರಿ

ಮಂಗಳೂರು ಅಕ್ಟೋಬರ್ 18 : ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಮೊಬೈಲ್ ಫೋನ್ ಟವರ್ ಕಂಪೆನಿಗಳು ಗ್ರಾಮ ಪಂಚಾಯತಿಗೆ ತೆರಿಗೆ ಪಾವತಿ ಮಾಡುತ್ತಿಲ್ಲ ಎಂಬ ದೂರುಗಳು ಹೆಚ್ಚು ಬಂದಿವೆ ಹಾಗಾಗಿ ಅಂತಹ ಕಂಪೆನಿಗಳ ವಿರುದ್ಧ ನೋಟಿಸ್ ನೀಡಿ ತೆರಿಗೆ ಕಟ್ಟುವಂತೆ ಆದೇಶ ನೀಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೆರ್ಮುದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರಿಗೆ ಜಮೀನು ಕಾದಿರಿಸುವ ಬಗ್ಗೆ ಮಾಹಿತಿ ಪಡೆದು ಕೊಂಡಿದ್ದೇನೆ ಮತ್ತು ಇನ್ನೂ ಕೆಲವು ಜಮೀನುಗಳ ವಿಚಾರಗಳು ಕೋರ್ಟ್ ನಲ್ಲಿ ವಿಚಾರಣೆಯ ಹಂತದಲ್ಲಿದೆ ಆದಷ್ಟೂ ಬೇಗನೆ ಈ ಕಾರ್ಯ ಪೂರ್ಣಗೊಳ್ಳುವ ಭರವಸೆ ಇದೆ ಹಾಗೂ ರಾಜೀವ್ ಗಾಂಧಿ ನಿವೇಶನ ಯೋಜನೆ ಅಡಿಯಲ್ಲಿ ಖಾಲಿರುವ ಸರ್ಕಾರಿ ಜಮೀನುಗಳನ್ನು ಸರ್ವೆ ಮಾಡಿ ನಿವೇಶನ ಇಲ್ಲದವರಿಗೆ ನ್ಯಾಯ ಬದ್ಧವಾಗಿ ವಿತರಿಸಿ ಎಂದು ಹೇಳಿದರು.

ರಾಜ್ಯೋತ್ಸವ ಪ್ರಶಸ್ತಿ : ಕನ್ನಡ ರಾಜೋತ್ಸವ ಪ್ರಶಸ್ತಿ ಆಯ್ಕೆ ಮಾಡುವ ಸಂದರ್ಭದಲ್ಲಿ ನಿಯಾಮಾನುಸಾರವಾಗಿ ಸರಕಾರದ ಮಾನದಂಡದ ಮೂಲಕ ಆಯ್ಕೆ ಮಾಡಬೇಕು. ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ನೀರಿಕ್ಷೆ ಇದ್ದವರಿಗೆ ಅಲ್ಲಿ ಪ್ರಶಸ್ತಿ ಸಿಗದೆ ಇದ್ದಾಗ ಜಿಲ್ಲಾ ಮಟ್ಟದಲ್ಲಿ ನೀಡೋದು ಸಮಾಧಾನಕರವಾಗಿರುತ್ತದೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಬಂದಿರುವಂತಹ ಅರ್ಜಿಗಳ ಮಾಹಿತಿ ಪಡೆದ ಸಚಿವರು ಎಲ್ಲಾ ಕ್ಷೇತ್ರಗಳಿಗೆ ಹಂಚಿಕೆಯಾಗುವಂತೆ ಕನಿಷ್ಠ 25 ಪ್ರಶಸ್ತಿಗಳನ್ನು ನೀಡಬೇಕು ಎಂದು ತಿಳಿಸಿದರು.

ಅಬ್ಬಕ್ಕ ಉತ್ಸವ :ಜಿಲ್ಲಾಡಳಿತದ ಮೂಲಕ ನಡೆಯುವಂತಹ ಪ್ರತಿ ಉತ್ಸವಗಳಿಗೆ ಸಂಬಧಪಟ್ಟ ಸಮಿತಿಗಳು ತಮ್ಮ ಸಲಹೆಗಳನ್ನು ನೀಡಬಹುದು, ಆದುದರಿಂದ ಅಬ್ಬಕ್ಕ ಉತ್ಸವಕ್ಕೆ ಸಂಬಂಧಿಸಿದ ಎರಡು ಸಮಿತಿಗಳನ್ನು ಸೇರಿಸಿ ಸಭೆ ನಡೆಸುವ ಹಾಗೂ ಅವರ ಅಭಿಪ್ರಾಯಗಳನ್ನು ಪಡೆದು ಸರಕಾರದ ನಿಯಮದ ಪ್ರಕಾರ ಉತ್ಸವ ನಡೆಸುವುದು ಸೂಕ್ತವಾದೆ. ಕರಾವಳಿ ಉತ್ಸವದ ಹಿಂದಿನ ವರ್ಷದ ಮಾದರಿಯನ್ನು ಸರಕಾರಕ್ಕೆ ನೀಡಿ ಅದರಂತೆ ಪ್ರಸ್ತುತ ಕರಾವಳಿ ಉತ್ಸವ ನಡೆಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಕಂಬಳ :ಪಿಲಿಕುಳದಲ್ಲಿ ಜಿಲ್ಲೆಯ ಜಾನಪದ ಕಲೆಯಾದ ಕಂಬಳವನ್ನು ಜನವರಿ ಅಂತ್ಯದಲ್ಲಿ ಅಥವಾ ಫೆಬ್ರವರಿಯಲ್ಲ್ಲಿ ನಡೆಸಬಹುದಾಗಿದೆ. ಇದಕ್ಕೆ ಎಲ್ಲಾ ರೀತಿಯ ಪೂರ್ವಸಿದ್ಧತೆಗಳನ್ನು ನಡೆಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಕಂಬಳಕ್ಕೆ ಬೇಕಾಗುವ ಅನುದಾನದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು ಅನುದಾನದ ಬಗ್ಗೆ ಪ್ರಸ್ತಾವನೆಯನ್ನು ಸರಕಾರಕ್ಕೆ ನೀಡಿ, ಆದಷ್ಟು ಬೇಗ ಮಂಜೂರು ಮಾಡಿಸುವಂತೆ ಭರವಸೆ ನೀಡಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *