Connect with us

    KARNATAKA

    ಸಾರಿ ಎಕ್ಸ್‌ಪೋರ್ಟ್ ಅಲ್ಲ, ಇದು ಕಾಡು ಕೋಳಿ ಪುಕ್ಕ ಫಾರೀನ್ ಎಕ್ಸ್‌ಪೋರ್ಟ್..!

    ದಾವಣಗೆರೆ : ಹೊರ ದೇಶಗಳಲ್ಲಿ ಭಾರಿ ಡಿಮ್ಯಾಂಡ್ ಇರುವ ಕಾಡುಕೋಳಿ ರೆಕ್ಕೆ-ಪುಕ್ಕವನ್ನ ಹೊರದೇಶಕ್ಕೆ ಅಂಚೆಯಲ್ಲಿ ಸಾಗಾಟ ಮಾಡಲು ಯತ್ನಿಸಿ ಆರೋಪಿ ಸಿಕ್ಕಿ ಬಿದ್ದಿದ್ದಾನೆ.

    ಬೇಟೆಗೆ ಪ್ರಸಿದ್ದಿ ಪಡೆದಿರುವ ಹಕ್ಕಿಪಿಕ್ಕಿ ಸಮುದಾಯದ ದಾವಣಗೆರೆ ಚನ್ನಗಿರಿ ಅಜಯ್‌ ಎಂಬಾತ ಕಾಡುಕೋಳಿ ರೆಕ್ಕೆ-ಪುಕ್ಕವನ್ನ ಹೊರದೇಶಕ್ಕೆ ಅಂಚೆಯಲ್ಲಿ ಸಾಗಾಟ ಮಾಡಲು ಹೋಗಿ ಎರಡನೇ ಸಲ ಸಿಕ್ಕಿಬಿದ್ದ ಆರೋಪಿಯಾಗಿದ್ದಾನೆ. ವಿಶೇಷ ಅಂದ್ರೆ ಈತನ ವಿರುದ್ಧ 2021ರಲ್ಲಿ ಇದೇ ತರಹದ ಪ್ರಕರಣ ದಾಖಲಾಗಿತ್ತು. ಸೂಕ್ತ ಸಾಕ್ಷಾಧಾರಗಳ ಕೊರತೆಯಿಂದ ಜಾಮೀನು ಮೇಲೆ ಆಚೆ ಬಂದಿದ್ದ. ಈಗ ಪುನಃ ರಾಜ್ಯ ಅರಣ್ಯ ಇಲಾಖೆ ಸಂಚಾರಿ ದಳ ಈತನನ್ನು ಬಂಧಿಸಿದೆ. ಚನ್ನಗಿರಿ ಸುತ್ತಲು ಸಹಜವಾಗಿ ಕಾಡುಕೋಳಿ ಬೇಟೆ ಇತ್ತು. ಮಾಂಸಕ್ಕಾಗಿ ಬಳಸಿ ರೆಕ್ಕ-ಪುಕ್ಕಗಳನ್ನ ಬಿಸಾಡುತ್ತಿದ್ದರು. ಈ ಅನುಪಯುಕ್ತ ರೆಕ್ಕೆಗಳಿಗೆ ಹೊರದೇಶದಲ್ಲಿ ಬೇಡಿಕೆ ಇರೋದನ್ನ ಅಜಯ್‌ ಮೊಬೈಲ್‌ಲ್ಲಿ ನೋಡಿ ತಿಳಿದಿದ್ದ. ಅಲ್ಲಿನ ಹವ್ಯಾಸಿ ಮೀನುಗಾರರೂ ಸಹ ಇದನ್ನ ಕುಂಚದ ತರಹ ಬಳಸುತ್ತಿದ್ದು, ಸಹಜವಾಗಿ ಬೇಡಿಕೆ ಇತ್ತು. ಅವರನ್ನ ಸಂಪರ್ಕಿಸಿ ಪೋಸ್ಟ್‌ ಮೂಲಕವೇ ಕಳಿಸುತ್ತಿದ್ದ. ಹಣ ಬಂದರೆ ಲಾಭ, ಬಾರದಿದ್ದರೆ ತೊಂದರೆ ಇಲ್ಲ ಎಂಬ ಲೆಕ್ಕಾಚಾರದಲ್ಲಿ ನಿರಂತರವಾಗಿ ಕಾಡುಕೋಳಿ ಸಂಹಾರ ಸಾಗಿತ್ತು. ಸ್ಥಳೀಯವಾಗಿ ಬೇಟೆಯಾಡುವವರಿಂದಲೂ ಚಿಲ್ಲರೆ ಹಣಕ್ಕೆ ಬಿಸಾಡುವ ರೆಕ್ಕೆ-ಪುಕ್ಕ ಖರೀದಿಸಿ, ಹೊರದೇಶಕ್ಕೆ ನಕಲಿ ಫ್ರಂ ಅಡ್ರೆಸ್‌ ಬಳಸಿ ಅಂತರ್‌ದೇಶಿ ಅಂಚೆ ಮೂಲಕ ಕಳಿಸುತ್ತಿದ್ದ. ಒಮ್ಮೆ ಬೆಂಗಳೂರಿನಲ್ಲಿ ಈ ಪ್ಯಾಕೆಟ್‌ಗಳು ಸಿಕ್ಕಿದ್ದವು. ಸೀರೆ ಹೆಸರಲ್ಲಿ ಸಾಗಾಟವಾಗುತ್ತಿದ್ದ ಬಾಕ್ಸ್‌ಗಳನ್ನ ಬಿಚ್ಚಿದಾಗ ಈ ದಂಧೆ ಬೆಳಕಿಗೆ ಬಂದಿತ್ತು.. ಬೆಂಗಳೂರಿನಲ್ಲಿ ಸ್ಯಾಂಪಲ್ ಬಾಕ್ಸ್ ತೆರೆದು ನೋಡಿದಾಗ ಸುಮಾರು ೨೫ ಬಾಕ್ಸ್‌ಗಳು ಸಿಕ್ಕಿದ್ದವು. ಎರಡನೇ ಸಲವೂ ಚನ್ನಗಿರಿಯಿಂದ ಪೋಸ್ಟ್‌ ಆದ ಬಗ್ಗೆ ಮಾಹಿತಿ ಸಿಕ್ಕ ನಂತರ ಅರಣ್ಯ ಇಲಾಖೆ ಅಜಯ್‌ ಎಂಬಾತನೇ ವೃತ್ತಿಪರ ದಂಧೆಕೋರ ಎಂಬುದು ಗೊತ್ತಾಗಿದ್ದು. ಸಂಚಾರಿ ಹಾಗೂ ಜಾಗೃತ ದಳ ಅಧಿಕಾರಿಗಳು ಆತನನ್ನು ಬಲವಾದ ಸಾಕ್ಷ್ಯಾಧಾರಗಳೊಂದಿಗೆ ಬಂಧಿಸಿ ಕೋರ್ಟಿಗೆ ಹಾಜರು ಪಡಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *