Connect with us

    BANTWAL

    ಪಕ್ಷಕ್ಕಾಗಿ ಪ್ರಾಣ ಕೊಟ್ಟ ಕಾರ್ಯಕರ್ತನ ತ್ಯಾಗ ಮರೆಯದ ಬಿಜೆಪಿ, ಶಾಸಕ ಡಾ.ಭರತ್ ಶೆಟ್ಟಿ ನೆರವಿನಿಂದ ಕುಟುಂಬಕ್ಕೆ ಸೂರಿನ ಆಸರೆ..!

    ಬಂಟ್ವಾಳ : ಪಕ್ಷಕ್ಕಾಗಿ ತನ್ನಪ್ರಾಣವನ್ನೇ ತ್ಯಾಗ ಮಾಡಿದ ಕಾರ್ಯಕರ್ತನ ಕುಟುಂಬಕ್ಕೆ ಆಸರೆಯಾದ ಶಾಸಕರಾದ ಡಾ. ಭರತ್ ಶೆಟ್ಟಿ ವೈ ಹಾಗೂ ಉತ್ತರ ಮಂಡಲ ಬಿಜೆಪಿ ಯುವ ಮೋರ್ಚ ತಂಡವು ಆ ಕಾರ್ಯಕರ್ತ ತನ್ನ ತ೦ದೆ ತಾಯಿಗೆ ಮನೆಯೊಂದನ್ನು ನಿರ್ಮಿಸಿ ಕೊಡಬೇಕೆಂಬ ಕನಸನ್ನು ಈಡೇರಿಸಿ ಧನ್ಯರಾಗಿದ್ದಾರೆ.

    ರವಿವಾರ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಆ ಕಾರ್ಯಕರ್ತನ ಪೋಷಕರ ಕಣ್ಣಾಲಿಗಳು ತುಂಬಿ ಒಂದು ಕಣ್ಣೀರ ಹನಿಯ ಮೂಲಕ ಕೃತಜ್ಞತೆಯ ಭಾವ ಹೊರಬ೦ದಿತು. 2004ರಲ್ಲಿ ಚುನಾವಣೆಯ ಸಂದರ್ಭ ಅರ್ಕುಳದ ವಳಚ್ಚಿಲ್ ಗ್ರಾಮದ ಬಿಜೆಪಿ ಕಾರ್ಯಕರ್ತ ಜಗದೀಶ್ ಪೂಜಾರಿ ಬೂತೊ೦ದರಲ್ಲಿ ಚುನಾವಣಾ ಕರ್ತವ ನಿರ್ವಹಿಸುತ್ತಿದ್ದರು.ಈ ಸಂದರ್ಭ ಬುರ್ಕಾಧರಿಸಿ ಒರ್ವ ವ್ಯಕ್ತಿ ನಕಲಿ ಮತದಾನ ಮಾಡಲು ಬಂದ ಮೇರೆಗೆ ಆ ಬಗ್ಗೆ ಚುನಾವಣಾ ಅಧಿಕಾರಿಗೆ ದೂರು ದೂರು ಸಲ್ಲಿಸಿದರು ಇದನ್ನೇ ನೆಪವಾಗಿರಿಸಿ ದುಷ್ಕರ್ಮಿಗಳು ಈತ ತನ್ನ ಮನೆಗೆ ಬರುತ್ತಿದ್ದಾಗ ಚೂರಿಯಿಂದ ಇರಿದು ಹತ್ಯೆ ಮಾಡಿದ್ದರು

    .ಕಡು ಬಡತನದಲ್ಲಿಯೂ ಕುಟುಂಬವನ್ನು ನೋಡಿಕೊಳ್ಳಲು ಸಣ್ಣಉದ್ಯೋಗದ ಆಸರೆ ಹೊಂದಿದ್ದ ಇವರು, ಈ ನಡುವೆ ಪಕ್ಷಕ್ಕಾಗಿ, ಹಿಂದುತ್ವಕ್ಕಾಗಿ ಯಾವುದೇ ಅಂಜಿಕೆ ಇಲ್ಲದೆ ಹೋರಾಟವನ್ನು ನಡೆಸುತ್ತಾ ಹುತಾತ್ಮರಾದ ಜಗದೀಶ್ ಪೂಜಾರಿಯ ಕನಸನ್ನು ನನಸು ಮಾಡುವ ಜವಾಬ್ದಾರಿಯನ್ನುಶಾಸಕರಾದ ಡಾ.ಭರತ್‌ ಶೆಟ್ಟಿ ವೈ, ಮಂಗಳೂರು ಉತ್ತರಮಂಡಲದ ಬಿಜೆಪಿ ಯುವ ಮೋರ್ಚ ತಂಡ ತೆಗೆದುಕೊಂಡಿಲ್ಲದೆ 12 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಮನೆಯನ್ನು ನಿರ್ಮಿಸಿ ಕೊಟ್ಟಿದೆ. ಹಾಲ್, ಎರಡು ಕೊಠಡಿ, ಅಡುಗೆ ಮನೆ ,ಶೌಚಾಲಯ ಸಹಿತ ಉತ್ತಮ ವ್ಯವಸ್ಥೆ ಹೊಂದಿದ ಮನೆ ನಿರ್ಮಿಸಲಾಗಿದೆ.

    ಹೊಸ ಮನೆಯ ಉದಾಟನೆ ರವಿವಾರ ನಡೆಯಿತು. ಸಂಸದರಾದ ಬ್ರಿಜೇಶ್ ಚೌಟ ಅವರು ಮನೆ ಫಲಕ ಅನಾವರಣಗೊಳಿಸಿ ಶಾಸಕರು ಹಾಗೂ ಕಾರ್ಯಕರ್ತರ ಶ್ರಮವನ್ನು ಶ್ಲಾಘಿಸಿದರಲ್ಲದೆ ಬಿಜೆಪಿ ಪಕ್ಷವನ್ನು ಬಲಿಷ್ಟಗೊಳಿಸಿದ್ದೇ ಇಂತಹ ಒಗ್ಗಟ್ಟಿನ ಕಾರ್ಯಕ್ರಮಗಳು ಆಗಿದೆ. ಪಕ್ಷದ ಜಿಲ್ಲಾ ಘಟಕವು ಸದಾ ಕಾರ್ಯಕರ್ತರ ಜತೆ ನಿಲ್ಲುತ್ತದೆ, ಅವರ ಕಷ್ಟಗಳಿಗೆ ಸ್ಪಂದಿಸುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.

    ಶಾಸಕರಾದ ಡಾ.ಭರತ್ ಶೆಟ್ಟಿ ವೈ ಮಾತನಾಡಿ, ಪಕ್ಷದ ಕಾರ್ಯಕರ್ತ ಜಗದೀಶ್ ಪೂಜಾರಿ ಅವರು ಹಿಂದುತ್ವಕ್ಕಾಗಿ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಅವರ ಕಷ್ಟಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯವಾಗಿದೆ.ಇಂದು ಮನೆ ನಿರ್ಮಿಸಿಕೊಟ್ಟಿರುವುದು ನಮ್ಮೆಲ್ಲರಲ್ಲಿ ಧನ್ಯತಾ ಭಾವ ಮೂಡಿಸಿದೆ. ಇದೊಂದು ನನ್ನ ಜೀವನದಲ್ಲಿ ಭಾವನಾತ್ಮಕ ಕ್ಷಣವಾಗಿದೆ ಎಂದರು.

    ಕಾರ್ಯಕ್ರಮದಲ್ಲಿ ಗೃಹ ನಿರ್ಮಾಣಕ್ಕೆ ಸಹಕರಿಸಿದ ಶಾಸಕರಾದ ಡಾ.ಭರತ್‌ ಶೆಟ್ಟಿ ವೈ, ಭರತ್ ರಾಜ್ ಕೃಷ್ಣಾಪುರ, ಶ್ವೇತ ಪೂಜಾರಿ ಹಾಗೂ ಕಾರ್ಯಕರ್ತರನ್ನು ಅಭಿನಂದಿಸಲಾಯಿತು.

    ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ರಾಜೇಶ್‌ ಕೊಟ್ಟಾರಿ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷನಾದನ್‌ ಮಲ್ಯ ಪ್ರಮುಖರಾದ ಭರತ್‌ ರಾಜ್ ಕೃಷ್ಣಾಪುರ,ಪ್ರದೀಪ್ ಶೆಟ್ಟಿ ಅಡ್ಯಾರ್, ಪ್ರವೀಣ್ ಶೆಟ್ಟಿ,ಸದಾನಂದ ಆಳ್ವನಾರಾಯಣ ಪೂಜಾರಿ ಕಮಲಾಕ್ಷ ತಲಿಮಾರ್.ಆಶಿತ್ ನೊಂಡ, ರಕ್ಷಿತ್ ಪೂಜಾರಿ, ಸಂದೀಪ್ ಶೆಟ್ಟಿ ರಣ್‌ ದೀಪ್ ಕಾಂಚನ್, ಸ೦ದೀಪ ಪಚ್ಚನಾಡಿ, ಮನೆಯವರಾದ ನಾರಾಯಣಪೂಜಾರಿ, ಚಂದ್ರಾವತಿ, ಸಹೋದರಿ ವಿನೋದ್, ಸಹೋದರ ದಿನೇಶ್, ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *