Connect with us

LATEST NEWS

ದಕ್ಷಿಣಕನ್ನಡ ಜಿಲ್ಲೆಯಲ್ಲಿ ವಿಕೇಂಡ್ ಕರ್ಪ್ಯೂ ರದ್ದು – ಜಿಲ್ಲಾಧಿಕಾರಿ ಆದೇಶ

ಮಂಗಳೂರು ಸೆಪ್ಟೆಂಬರ್ 09: ಕೋವಿಡ್ ನಿಯಂತ್ರಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೇರಲಾಗಿದ್ದ ವಾರಾಂತ್ಯದ ಕರ್ಫ್ಯೂ ರದ್ದುಗೊಳಿಸಲಾಗಿದ್ದು, ಈ ಕುರಿತಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು, ರಾತ್ರಿ ಕರ್ಪ್ಯೂ ಎಂದಿನಂತೆ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇಕಡ 2 ರ ಆಸುಪಾಸಿನಲ್ಲೇ ಇದ್ದು, ಈ ಹಿನ್ನಲೆ ಜಿಲ್ಲೆಯಲ್ಲಿ ವಿಕೇಂಡ್ ಕರ್ಪ್ಯೂ ಮುಂದುವರೆಸಲಾಗಿತ್ತು. ಆದರೆ ವಿಕೇಂಡ್ ಕರ್ಪ್ಯೂನಿಂದಾಗಿ ವರ್ತಕರು ಬಾರಿ ನಷ್ಟ ಅನುಭವಿಸಿದ್ದು, ವಿಕೇಂಡ್ ಕರ್ಪ್ಯೂ ತೆರವಿಗೆ ಕಳೆದ ವಾರ ರಾಜ್ಯ ಸರಕಾರಕ್ಕೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಮಾಡಿದ್ದರು. ಈ ಹಿನ್ನಲೆ ಇದೀಗ ವಿಕೇಂಡ್ ಕರ್ಪ್ಯೂ ತೆರವಾಗಿದ್ದು, ರಾತ್ರಿ ಕರ್ಪ್ಯೂ 9 ರಿಂದ ಬೆಳಿಗ್ಗೆ 5 ರವರೆಗೆ ಮುಂದುವರೆದಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *