Connect with us

LATEST NEWS

ಮಂಗಳೂರು – ಎಪ್ರಿಲ್ 27 ರಿಂದ ಎಪ್ರಿಲ್ 29 ರವರೆಗೆ ಎರಡು ದಿನ ನೀರಿಲ್ಲ…!!

ಮಂಗಳೂರು ಎಪ್ರಿಲ್ 25 : ಮಂಗಳೂರಿನ ಪಾಲಿಕೆ ವ್ಯಾಪ್ತಿಯಲ್ಲಿ ಎರಡು ದಿನಗಳ ಕಾಲ ಸಾರ್ವಜನಕರಿಗೆ ಕುಡಿಯುವ ನೀರಿನ ಸಮಸ್ಯೆಯಾಗಲಿದೆ. ಎಪ್ರಿಲ್ 27 ರಿಂದ ಎಪ್ರಿಲ್ 29 ರ ಬೆಳಗ್ಗಿನ ವರೆಗೆ ನೀರು ಸರಬರಾಜು ವ್ಯತ್ಯಗೊಳ್ಳಲಿದೆ ಎಂದು ಪಾಲಿಕೆ ತಿಳಿಸಿದೆ.

ನಗರಕ್ಕೆ ನೀರು ಸರಬರಾಜು ಮಾಡುವ ತುಂಬೆ ಅಣೆಕಟ್ಟಿನಲ್ಲಿ ತಾಂತ್ರಿಕ ಕಾಮಗಾರಿ ಹಿನ್ನೆಲೆಯಲ್ಲಿ ಎ.27ರಂದು ಬೆಳಗ್ಗೆ 6ಗಂಟೆಯಿಂದ 29ರ ಬೆಳಗ್ಗೆ 6 ಗಂಟೆಯವರೆಗೆ 48ಗಂಟೆಗಳ ಕಾಲ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಅಣೆಕಟ್ಟಿನ ಎಚ್‌ಎಲ್‌ಪಿಎಸ್‌ 2- 80 ಎಂಎಲ್‌ಡಿ ರೇಚಕ ಸ್ಥಾವರದಲ್ಲಿರುವ 1,200 ಎಂ.ಎಂ. ವ್ಯಾಸದ ಕೊಳವೆ ದುರಸ್ತಿ ಕಾಮಗಾರಿ ಮತ್ತು ಎಲ್‌ಎಲ್‌ಪಿಎಸ್‌-1 ಪಂಪ್‌ ನಂಬ್ರ-2ರ ಹೆಡರ್‌ ಬದಲಾವಣೆ ಮತ್ತು ಇತರ ಪೂರಕ ಕಾಮಗಾರಿ ನಡೆಯಲಿದೆ. ಇದರಿಂದಾಗಿ ನೀರು ಪೂರೈಕೆ ಸ್ಥಗಿತಗೊಳ್ಳುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಪಾಲಿಕೆ ಆಡಳಿತದೊಂದಿಗೆ ಸಹಕರಿಸುವಂತೆ ಪಾಲಿಕೆ ಮನವಿ ಮಾಡಿಕೊಂಡಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *