LATEST NEWS
ಸಂಪರ್ಕ ಕಳೆದುಕೊಂಡ ದಕ್ಷಿಣಕನ್ನಡ ಜಿಲ್ಲೆಯಲ್ಲಿ ತರಕಾರಿಗೆ ಪರದಾಟ
ಸಂಪರ್ಕ ಕಳೆದುಕೊಂಡ ದಕ್ಷಿಣಕನ್ನಡ ಜಿಲ್ಲೆಯಲ್ಲಿ ತರಕಾರಿಗೆ ಪರದಾಟ
ಮಂಗಳೂರು ಅಗಸ್ಟ್ 19: ಕರಾವಳಿ ಹಾಗೂ ಮಲೆನಾಡಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ದಕ್ಷಿಣಕನ್ನಡ ಜಿಲ್ಲೆ ಸಂಪರ್ಕ ರಸ್ತೆಗಳು ಸಂಪೂರ್ಣ ಬಂದ್ ಆಗಿದ್ದು, ದಕ್ಷಿಣಕನ್ನಡ ಜಿಲ್ಲೆಯ ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ. ದಕ್ಷಿಣಕನ್ನಡ ಜಿಲ್ಲೆಯ ಜನರ ದಿನನಿತ್ಯದ ತರಕಾರಿಗಳು ಘಟ್ಟ ಪ್ರದೇಶದಿಂದ ಮಂಗಳೂರು ಆಗಮಿಸುತ್ತಿದ್ದು, ರಸ್ತೆ ಸಂಪರ್ಕ ಬಂದ್ ಆದ ನಂತರ ಜಿಲ್ಲೆಗೆ ಆಗಮಿಸುವ ತರಕಾರಿಗಳು ಬಂದ್ ಆಗಿವೆ.
ಮಂಗಳೂರು ಮಾರ್ಕೆಟ್ ಅಂದ್ರೆ ಯಾವುತ್ತು ಜನಜಂಗುಳಿಯಿಂದ ತುಂಬಿ ತುಳುಕ್ತಾ ಇತ್ತು. ಆದ್ರೆ ಇದೀಗ ಬೆರಳೆಣಿಕೆಯಷ್ಟು ಮಾತ್ರ ತರಕಾರಿಗಳು ಈ ಮಾರ್ಕೆಟ್ ನಲ್ಲಿ ಕಾಣ ಸಿಗುತ್ತಿದ್ದು. ಸಮಯಕ್ಕೆ ಸರಿಯಾಗಿ ತರಕಾರಿಗಳು ಮಾರ್ಕೆಟ್ ಸೇರದೇ , ಸಮಯ ಮೀರಿ ತರಕಾರಿಗಳು ಮಾರ್ಕೆಟ್ ಸೇರುವುದರಿಂದ ತರಕಾರಿಗಳೆಲ್ಲ ಕೊಳೆತು ಹೋಗುತ್ತದೆ. ಇದರಿಂದ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.
ಇದೀಗ ಮಳೆಯ ಎಫೆಕ್ಟ್ ಮಂಗಳೂರು ಸೆಂಟ್ರಲ್ ಮಾರುಕಟ್ಟೆಗೂ ತಟ್ಟಿದೆ. ಶಿರಾಡಿ ಘಾಟ್ ಹಾಗೂ ಚಾರ್ಮಾಡಿ ರಸ್ತೆ ಬಂದ್ ಆಗಿರುವುದರಿಂದ ತರಕಾರಿಗಳು ಜಿಲ್ಲೆಗೆ ಆಮದು ಆಗ್ತಾ ಇಲ್ಲ. ಮಾರುಕಟ್ಟೆಯಲ್ಲಿ ತರಕಾರಿ ಶೇಖರಣೆ ಕಡಿಮೆಯಾಗುತ್ತಿದ್ದು, ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.
ಭಾರಿ ಮಳೆಯಿಂದ ಗುಡ್ಡ ಕುಸಿದು ಚಾಮಾಡಿ ಘಾಟ್ ಬಂದ್ ಆಗಿರುವರಿಂದ ತರಕಾರಿಗಳು ಮಾರುಕಟ್ಟೆಗೆ ಬರುತ್ತಾ ಇಲ್ಲ. ಸಮಯಕ್ಕೆ ಸರಿಯಾಗಿ ತರಕಾರಿ ಗಳು ಮಾರ್ಕೆಟ್ ಗೆ ಬಾರದೆ ಮಾರುಕಟ್ಟೆ ಬಿಕೋ ಎನಿಸುತ್ತಿದೆ. ಸಮಯ ಮೀರಿ ಬಂದಂತಹ ತರಕಾರಿಗಳು ಹಾಳಾಗುತ್ತಿದೆ. ಹಾಗಾಗಿ ತರಕಾರಿ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
ಒಟ್ಟಿನಲ್ಲಿ, ಭೀಕರ ವರುಣನ ಆಭ್ಟದಿಂದ ಜಿಲ್ಲೆಯ ಜನರು ಇತರೆ ಜಿಲ್ಲೆಯ ಸಂಪರ್ಕ ಕಳೆದುಕೊಂಡಿರುವುದು ಮಾತ್ರವಲ್ಲದೆ, ತರಕಾರಿ ಹಣ್ಣು ಹಂಪಲುಗಳಿಗಾಗಿ ಪರದಾಡುವಂತಾಗಿದೆ.