LATEST NEWS
ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ – ನಟಿ ಸನುಷಾ ಸಂತೋಷ
ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ – ನಟಿ ಸನುಷಾ ಸಂತೋಷ
ತಿರುವನಂತಪುರಂ ಫೆಬ್ರವರಿ 2: ಇತ್ತೀಚಿಗಷ್ಟೇ ಖ್ಯಾತ ನಟಿ ಅಮಲಾ ಪೌಲ್ ಮೇಲೆ ಲೈಂಗಿಕ ಕಿರುಕುಳ ನಡೆದ ಬಗ್ಗೆ ವರದಿಯಾಗಿತ್ತು. ಈ ಬೆನ್ನಲ್ಲೇ ಈಗ ಮತ್ತೊಬ್ಬ ನಟಿಯ ಮೇಲೆ ಲೈಂಗಿಕ ಕಿರುಕುಳ ನಡೆದೆ ಬಗ್ಗೆ ವರದಿಯಾಗಿದೆ. ಕನ್ನಡ ಸಂತೆಯಲ್ಲಿ ನಿಂತ ಕಬೀರ ಚಿತ್ರದ ನಟಿ ಸನುಷ ಸಂತೋಷ್ ಗೆ ರೈಲಿನಲ್ಲಿ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ.
23 ವರ್ಷದ ನಟಿ ಸನುಷಾ ಸಂತೋಷ್ ಕನ್ಯಾಕುಮಾರಿಯಿಂದ ತಿರುವನಂತಪುರಂಗೆ ಮಾವೆಲಿ ಎಕ್ಸ್ ಪ್ರೆಸ್‍ನ 2 ಟೈರ್ ಎಸಿ ಕೋಚ್‍ನಲ್ಲಿ ಪ್ರಯಾಣಿಸುತ್ತಿದ್ದರು. ಸನುಷಾ ಮೇಲಿನ ಬರ್ತ್‍ನಲ್ಲಿ ಮಲಗಿದ್ದ ವೇಳೆ ವ್ಯಕ್ತಿಯೊಬ್ಬ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ರೈಲಿನಲ್ಲಿ ನಾನು ನಿದ್ದೆ ಮಾಡುವಾಗ ಯಾರೋ ನನ್ನ ತುಟಿಯ ಮೇಲೆ ಕೈ ಸವರುತ್ತಿದ್ದ. ಕಣ್ಣು ಬಿಟ್ಟು ನೋಡಿದಾಗ ಶಾಕ್ ಆಯ್ತು. ತಕ್ಷಣ ನಾನು ಆತನ ಕೈಯನ್ನು ಬಿಗಿಯಾಗಿ ಹಿಡಿದು, ಆತನ ಬೆರಳುಗಳನ್ನು ತಿರುಚಿದೆ ಎಂದು ಸನುಷಾ ತಿಳಿಸಿದ್ದಾರೆ.
ನಂತರ ಆತನ ಕೈ ಹಿಡಿದು ಕೆಳಗೆ ಮಲಗಿದ ವ್ಯಕ್ತಿಯ ಸಹಾಯ ಕೇಳಿದೆ. ಆದರೆ ಅವರು ಯಾವುದೇ ಸಹಾಯ ಮಾಡಲಿಲ್ಲ. ನಾನು ಕಿರುಚುತ್ತಿದ್ದರೂ ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ. ಈ ಘಟನೆ ಮಧ್ಯರಾತ್ರಿ ಸುಮಾರು 1.10ಕ್ಕೆ ನಡೆದಿದ್ದು ಎಂದು ಸನುಷಾ ತಿಳಿಸಿದ್ದಾರೆ.
ನಂತರ ಟಿಟಿಇ ಬಂದು ಮಾಹಿತಿ ಪಡೆದ ನಂತರ ಮುಂದಿನ ರೈಲ್ವೇ ಸ್ಟೇಷನ್‍ನ ಪೊಲೀಸರಿಗೆ ಮಾಹಿತಿ ತಿಳಿಸಿದರು. ಅರ್ಧ ಗಂಟೆ ಆದ ಮೇಲೆ ನಾವು ತ್ರಿಶೂರ್ ತಲುಪಿದಾಗ ಪೊಲೀಸರು ಆತನನ್ನು ಬಂಧಿಸಿದರು. ಪೊಲೀಸರಿಗೆ ನಾನು ನನ್ನ ಹೇಳಿಕೆ ಕೊಟ್ಟು, ಅದೇ ರೈಲಿನಲ್ಲಿ ನನ್ನ ಪ್ರಯಾಣ ಮುಂದುವರೆಸಿದೆ ಎಂದು ಸನುಷಾ ತಿಳಿಸಿದ್ದಾರೆ.
You must be logged in to post a comment Login