KARNATAKA
ರಾಜ್ಯ ಮಸೀದಿಗಳಲ್ಲಿ ಮೈಕ್ ಸದ್ದು ಪರಿಶೀಲಿಸಿ ಕ್ರಮಕ್ಕೆ ಡಿಜಿಪಿ ಸೂಚನೆ

ಬೆಂಗಳೂರು: ಮಸೀದಿಗಳಲ್ಲಿ ಅಳವಡಿಸಿರುವ ಧ್ವನಿ ವರ್ಧಕಗಳಶಬ್ದದಿಂದ ಸಾರ್ವ ಜನಿಕರಿಗೆ ತೊಂದರೆ ಉಂಟಾಗಿದ್ದರೆ ಪರಿಶೀಲಿಸಿ ನಿಯಮಾನುಸಾರ ಕ್ರಮ ಜರುಗಿ ಸುವಂತ ಪೋಲೀಸ್ ಮಹಾನಿರ್ದೇಶಕರು ತಮ್ಮ ಕಳಹಂತದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಜ್ಯಾದ್ಯಂತ ಮಸೀದಿಗಳಲ್ಲಿ ಅನಧಿಕೃತವಾಗಿ ಧ್ವನಿವರ್ಧಕ ಅಳವಡಿಸಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಕೂಡಲೇ ಮಸೀದಿಗಳಲ್ಲಿ ಧನ್ನಿವರ್ಧಕಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಡಿಜಿಪಿ ಆವರಿಗೆ ಬೆಂಗಳೂರಿನ ವಕೀಲ ಹರ್ಷ ಮುತಾಲಿಕ್ ಮನವಿ ಸಲ್ಲಿಸಿದ್ದರು. ಇದಕ್ಕೆ ಡಿಜಿಪಿ ಕಚೇರಿಯು ಅಧಿಕೃತವಾಗಿ ಪ್ರತಿಕ್ರಿಯಿಸಿ ಸುತ್ತೋಲೆ ಹೊರಡಿಸಿದೆ. ರಾಜ್ಯಾದ್ಯಂತ ಎಲ್ಲ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ಸಲ್ಲಿಸುವ ಪ್ರಾರ್ಥನೆ ವೇಳೆ ಹಚ್ಚು ಶಬ್ದ ಮಾಡುವುದರಿಂದ ತೊಂದರೆಯಾಗಿದೆ. ಈ ಮಸೀದಿಗಳಲ್ಲಿ ಧ್ವನಿವರ್ಧಕಗಳ ಮೇಲೆ ನಿರ್ಬಂಧ ಹೇರುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ನಿಯಮಾನುಸಾರ ಕ್ರಮ ತೆಗೆದುಕೊಳ್ಳಬೇಕೆಂದು ಸುತ್ತೋಲೆ ಹೊರಡಿಸಿದ್ದಾರೆ.
