KARNATAKA
ಬಲವಂತವಾಗಿ ಮತಾಂತರ ಮಾಡಬಾರದು, ಎಷ್ಟೋ ಜನ ಮುಸ್ಲಿಮರು ಲಿಂಗಾಯತರಾದ್ರು, ನಾವೇನಾದ್ರೂ ಮಾತಾಡಿದ್ವಾ: ಸಿ.ಎಂ ಇಬ್ರಾಹಿಂ
ಬೆಂಗಳೂರು, ಡಿಸೆಂಬರ್ 12: ಎಷ್ಟೋ ಜನ ಮುಸ್ಲಿಮರು ಲಿಂಗಾಯತರಾದರು ಆಗ ನಾವೇನಾದರೂ ಮಾತನಾಡಿದ್ವಾ ಎಂದು ಪ್ರಶ್ನಿಸುವ ಮೂಲಕ ಮತಾಂತರ ನಿಷೇಧ ಮಸೂದೆಗೆ ಕಾಂಗ್ರೆಸ್ ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ವಿರೋಧ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಸೆಂಬ್ಲಿಯಲ್ಲಿ ಮತಾಂತರ ನಿಷೇಧ ತಡೆ ಬಿಲ್ ಬರುತ್ತಿದೆ. ಬಲವಂತವಾಗಿ ಮತಾಂತರ ಮಾಡಬಾರದು ಅಂತ ಸಂವಿಧಾನದಲ್ಲೇ ಇದೆ. ಹಾಗಿದ್ದರೂ ಈ ಮಸೂದೆಯನ್ನು ಯಾಕೆ ತರುತ್ತಿದ್ದಾರೆ? ಇದರರ್ಥ ಸರ್ಕಾರ ಎಲ್ಲದರಲ್ಲೂ ವಿಫಲವಾಗುತ್ತಿದೆ. ಜನರ ಗಮನ ಬೇರೆ ಕಡೆ ಸೆಳೆಯಲು ಬೊಮ್ಮಾಯಿ ಮೂಲಕ ಮಸೂದೆ ಮಂಡನೆ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
ಮತಾಂತರವನ್ನು ಯಾರೂ ಬಲವಂತವಾಗಿ ಮಾಡಬಾರದು. ಸ್ವಯಿಚ್ಚೆಯಿಂದ ಬೇಕಾದರೆ ಮತಾಂತರವಾಗಲಿ. ಎಷ್ಟೋ ಜನ ಮುಸ್ಲಿಮರು ಲಿಂಗಾಯತರಾದರು. ಆಗ ನಾವೇನಾದರೂ ಮಾತಾಡಿದೆವಾ? ರಿಜ್ವಿ ಹಿಂದೂ ಆದ, ನಾವು ಏನಾದರೂ ಹೇಳಿದ್ವಾ? ಮತಾಂತರ ಅವರವರ ಇಚ್ಛೆ. ಅದಕ್ಕಾಗಿ ಒಂದು ಮಸೂದೆ ತರುವ ನಾಟಕ ಎಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ.
You must be logged in to post a comment Login