Connect with us

LATEST NEWS

ಸೆಪ್ಟೆಂಬರ್ ನಲ್ಲೂ ಶಬರಿಮಲೆಗೆ ಭಕ್ತರ ಪ್ರವೇಶ ನಿಷೇಧ ಸಾಧ್ಯತೆ

ಸೆಪ್ಟೆಂಬರ್ ನಲ್ಲೂ ಶಬರಿಮಲೆಗೆ ಭಕ್ತರ ಪ್ರವೇಶ ನಿಷೇಧ ಸಾಧ್ಯತೆ

ಕೇರಳ ಅಗಸ್ಟ್ 22 ಕೇರಳದಲ್ಲಿ ಜಲಪ್ರಳಯದ ನಂತರ ಸದ್ಯ ಮಳೆ ಬಿಡುವು ಪಡೆದಿದ್ದು, ಮಳೆ ನಿಂತರೂ ನೆರೆ ಪರಿಸ್ಥಿತಿ ಸುಧಾರಿಸಿಲ್ಲ, ಕೇರಳದ ಪ್ರಮುಖ ದೇವಸ್ಥಾನಗಳಿಗೆ ಮತ್ತು ಪ್ರವಾಸಿ ತಾಣಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರಾಕರಿಸಲಾಗಿದೆ.

ಕೇರಳದ ಪ್ರಮುಖ ದೇವಸ್ಥಾನ ಶಬರಿಮಲೆಗೆ ಕೂಡ ಭಕ್ತರಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ. ಪ್ರತಿ ತಿಂಗಳು ಸಂಕ್ರಾಂತಿ ಸಂದರ್ಭದಲ್ಲಿ 3 ಅಥವಾ 4 ದಿನ ದೇವರ ದರ್ಶನವಿರುತ್ತದೆ. ಈ ಸಂದರ್ಭದಲ್ಲಿ ಅಯ್ಯಪ್ಪ ವೃತಧಾರಿಗಳು ಮಾಲೆ ಧರಿಸಿ ಅಯ್ಯಪ್ಪನ ದರ್ಶನಕ್ಕೆ ಆಗಮಿಸುತ್ತಾರೆ. ಆದರೆ ಈ ಬಾರಿ ಮಾತ್ರ ಶಬರಿಮಲೆಗೆ ತೆರಳಬೇಕೆಂದು ವ್ರತ ಹಿಡಿದು ಮಾಲೆ ಧರಿಸಿದ ಸಾವಿರಾರು ಭಕ್ತರು ಯಾತ್ರೆ ಕೈಬಿಟ್ಟು, ಮಾಲೆ ತೆಗೆದು ಊರಲ್ಲೇ ವೃತ ಕೊನೆಗೊಳಿಸಿದ್ದಾರೆ.

ಓಣಂ ಕೇರಳದ ಪ್ರಮುಖ ಹಬ್ಬ, ಅಗಸ್ಟ್ (ಸಿಂಹಮಾಸ) 16 ರಿಂದ 21 ರವರೆಗೆ ಪ್ರತಿ ವರ್ಷ ಶಬರಿಮಲೆಯಲ್ಲಿ ತಿಂಗಳ ಪೂಜೆ ಇರುತ್ತಿತ್ತು. 23 ರಿಂದ 27 ರವರೆಗೆ ಓಣಂ ಹಿನ್ನಲೆಯಲ್ಲಿ ಭಕ್ತರಿಗಾಗಿ ದೇವಳ ತೆರೆಯಲು ನಿರ್ಧರಿಸಲಾಗಿತ್ತು. ಆದರೆ ಭಾರಿ ಮಳೆ, ನೆರೆಯಿಂದ ಈ ಎರಡು ಅವಧಿಯಲ್ಲಿಯೂ ಅಯ್ಯಪ್ಪ ಮಾಲೆಧಾರಿಗಳಿಗೆ ಪ್ರವೇಶ ನಿಷೇಧಿಸಲಾಗಿದೆ.

ದೇವಳಕ್ಕೂ ಪ್ರವಾಹ ತಟ್ಟಿದ್ದರಿಂದ ಸೆಪ್ಟೆಂಬರ್ 16 ರಿಂದ 21ರ ಅವಧಿಯ ತಿಂಗಳ ಪೂಜೆ ನಡೆಯುವ ಕನ್ಯಾ ಮಾಸ ಅವಧಿಯಲ್ಲಿಯೂ ಭಕ್ತರಿಗೆ ಪ್ರವೇಶ ಸಿಗುವುದು ಕಷ್ಟ ಎಂದು ದೇವಳದ ಕಚೇರಿ ಸಿಬ್ಬಂದಿಗಳು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *