Connect with us

    DAKSHINA KANNADA

    ದಾನಿಗಳಿಲ್ಲದೇ ಹೋದಲ್ಲಿ ಸಂತ್ರಸ್ತರು ಭಿಕ್ಷೆ ಬೇಡಬೇಕಾದ ಪರಿಸ್ಥಿತಿ ತಂದೊಡ್ಡುತ್ತಿತ್ತೇ ಸರಕಾರ !

    ದಾನಿಗಳಿಲ್ಲದೇ ಹೋದಲ್ಲಿ ಸಂತ್ರಸ್ತರು ಭಿಕ್ಷೆ ಬೇಡಬೇಕಾದ ಪರಿಸ್ಥಿತಿ ತಂದೊಡ್ಡುತ್ತಿತ್ತೇ ಸರಕಾರ !

    ಸುಳ್ಯ ಅಗಸ್ಟ್ 22: ಕೊಡಗಿನಲ್ಲಿ ಸಂಭವಿಸಿದ ಭೀಕರ ದುರಂತಕ್ಕೆ ನೂರಾರು ಕುಟುಂಬಗಳು ಬೀದಿ ಪಾಲಾಗಿವೆ. ಪ್ರಕೃತಿಯ ಮುನಿಸಿಗೆ ಸಿಕ್ಕಿ ಈ ಕುಟುಂಬಗಳು ತಮ್ಮ ಮನೆ , ಮಠಗಳನ್ನು ಕಳೆದುಕೊಂಡಿವೆ. ಕೊಡಗಿನ ಮದೆನಾಡು, ಮಕ್ಕಂದೂರು ಹಾಗೂ ಜೋಡುಪಾಳದಲ್ಲಿ ಆರಂಭಗೊಂಡ ಪ್ರಕೃತಿಯ ಪ್ರಹಾರ ಬಳಿಕ ಮುಕ್ಕೋಡು ಹಾಗೂ ಇತರ ಪ್ರದೇಶಗಳನ್ನೂ ಕಾಡಿದೆ.

    ಪ್ರಕೃತಿಯ ಈ ವಿಕೋಪಕ್ಕೆ ಸಿಲುಕು ಬೀದಿ ಪಾಲಾದ ಸಂತ್ರಸ್ತರಿಗೆ ಸರಕಾರ ಮುತುರ್ವಜಿ ವಹಿಸಿ ಅಲ್ಲಲ್ಲಿ ಗಂಜಿ ಕೇಂದ್ರಗಳನ್ನು ತೆರೆದಿದೆ.

    ಸಂತ್ರಸ್ತರ ನೆರವಿಗಾಗಿ 100 ಕೋಟಿ, 200 ಕೋಟಿ ಬಿಡುಗಡೆ ಮಾಡಲಾಗಿದೆ ಎನ್ನುವ ಹೇಳಿಕೆಗಳನ್ನು ಪ್ರತಿನಿತ್ಯ ಸರಕಾರದ ಪ್ರತಿನಿಧಿಗಳ ನೀಡುತ್ತಿದ್ದಾರೆ.

    ಸಂತ್ರಸ್ತರಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎನ್ನುವ ಫೋಸನ್ನೂ ಕೊಟ್ಟಿದ್ದರೆ, ಕೆಲವರು ಗಂಜಿಕೇಂದ್ರಗಳಿಗೆ ತೆರಳಿ ಸಂತ್ರಸ್ತರಿಗೆ ಬಿಸ್ಕಟ್ಟನ್ನೂ ಎಸೆದಿದ್ದಾರೆ.

    ಆದರೆ ಗಂಜಿಕೇಂದ್ರಗಳಲ್ಲಿರುವ ಸಂತ್ರಸ್ತರಿಗೆ ದಿನಂಪ್ರತಿ ಬೇಕಾದ ವಸ್ತುಗಳ ಪೂರೈಕೆಯನ್ನು ಸರಕಾರ ಈವರೆಗೆ ಮಾಡಿಯೇ ಇಲ್ಲ.

    ಸಂತ್ರಸ್ತರು ಇದೀಗ ಗಂಜಿಕೇಂದ್ರಗಳಲ್ಲಿ ಕಳೆದ ನಾಲ್ಕು ದಿನಗಳಿಂದ ರಾತ್ರಿ-ಹಗಲು ಕಳೆಯುತ್ತಿದ್ದು, ಅವರಿಗೆ ಬೇಕಾದ ಅಕ್ಕಿ ಸಾಮಾಗ್ರಿಗಳು, ಉಡುಪು ಹಾಗೂ ಇತರ ಸಾಮಾಗ್ರಿಗಳನ್ನು ಪೂರೈಸಬೇಕಾದ ಸರಕಾರ ಇದ್ಯಾವುದನ್ನೂ ಇಲ್ಲಿಯವರೆಗೆ ಮುಟ್ಟಿಸಿಲ್ಲ.

    ಗಂಜಿಕೇಂದ್ರ ತೆರೆದ ಮೊದಲ ದಿನ ಒಂದಿಟ್ಟು ಟೂತ್ ಬ್ರೆಶ್, ಸ್ವಲ್ಪ ಅಕ್ಕಿ , ಟೂತ್ ಪೇಸ್ಟ್ ಬಿಟ್ಟರೆ ಏನನ್ನೂ ಕೊಟ್ಟಿಲ್ಲ.

    ಸರಕಾರವನ್ನು ನಂಬಿಕೊಂಡು ದಾನಿಗಳೇನಾದರೂ ಅಕ್ಕಿ, ಬಟ್ಟೆ ಹಾಗೂ ಇತರ ಸಾಮಾಗ್ರಿಗಳನ್ನು ದಾನ ಮಾಡದೇ ಹೋಗಿರುತ್ತಿದ್ದಲ್ಲಿ, ಈ ಸಂತ್ರಸ್ತರೆಲ್ಲಾ ತಟ್ಟೆ ಹಿಡಿದು ಬಿಕ್ಷೆ ಬೇಡಬೇಕಾದ ಸ್ಥಿತಿ ನಿರ್ಮಾಣಗೊಳ್ಳುತ್ತಿತ್ತು.

    ಪ್ರತಿ ಗಂಜಿಕೇಂದ್ರದಲ್ಲೂ ಸರಾಸರಿ 200 ಕ್ಕೂ ಮಿಕ್ಕಿದ ಸಂತ್ರಸ್ತರಿದ್ದು, ದಿನಕ್ಕೆ ಒಂದು ಹೊತ್ತಿನ ಊಟಕ್ಕೇ 50 ರಿಂದ 60 ಕಿಲೋದಷ್ಟು ಅಕ್ಕಿಯ ಅಗತ್ಯವಿದೆ.

    ಅಷ್ಟೇ ಪ್ರಮಾಣದಲ್ಲಿ ಇತರ ವಸ್ತುಗಳ ಅಗತ್ಯವೂ ಇದ್ದು, ಇವೆಲ್ಲವನ್ನೂ ಇಂದಿನವರೆಗೂ ದಾನಿಗಳೇ ಪೂರೈಸಿದ್ದಾರೆ.

    ಪ್ರತಿ ಗಂಜಿಕೇಂದ್ರಗಳಿಗೂ ಅಧಿಕಾರಿಗಳು ಬಂದು ಹೋಗುತ್ತಿದ್ದರೂ, ಈ ಬಗ್ಗೆ ಯಾವ ಅಧಿಕಾರಿಯೂ ಚಕಾರ ಎತ್ತಿಲ್ಲ.

    ಸಂತ್ರಸ್ತರಿಗಾಗಿ 100 ಕೋಟಿ , 200 ಕೋಟಿ ಬಿಡುಗಡೆ ಮಾಡಿರುವ ಸರಕಾರ ಈ ಹಣವನ್ನು ಎಲ್ಲಿ ಖರ್ಚು ಮಾಡಿದೆ ಎನ್ನುವುದು ಮಾತ್ರ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.

    ಅಲ್ಲದೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೂ ದಾನಿಗಳು ಸಾಕಷ್ಟು ಪ್ರಮಾಣದಲ್ಲಿ ಆರ್ಥಿಕ ಸಹಾಯವನ್ನೂ ಮಾಡುತ್ತಿದ್ದು, ಈ ಹಣವೆಲ್ಲಾ ಯಾವುದಕ್ಕೆ ಖರ್ಚಾಗುತ್ತಿದೆ ಎನ್ನುವುದು ಮಾತ್ರ ನಿಗೂಢವಾಗಿಯೇ ಉಳಿದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply