FILM
ಗಾಂಜಾವನ್ನು ತುಳಸಿಗೆ ಹೋಲಿಕೆ – ನಟಿ ನಿವೇದಿತಾ ವಿರುದ್ದ ಎಫ್ಐಆರ್
ಬೆಂಗಳೂರು ಸೆಪ್ಟೆಂಬರ್ 4: ಗಾಂಜಾ ಪವಿತ್ರ ತುಳಸಿಯಂತೆ ಎಂದು ಹೇಳಿಕೆ ನೀಡಿದ್ದ ನಟಿ ನಟಿ ನಿವೇದಿತಾ ವಿರುದ್ಧ ಮಲ್ಲೇಶ್ವರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಗಾಂಜಾ ಔಷಧಿ ಗುಣವುಳ್ಳ ಸಸಿ. ತುಳಸಿ ತರವೇ ಅದನ್ನು ಬಳಕೆ ಮಾಡಬೇಕು‘ ಎಂಬುದಾಗಿ ನಟಿ ನಿವೇದಿತಾ ಮಾಧ್ಯಮದೊಂದಿಗಿನ ಸಂದರ್ಶನದಲ್ಲಿ ಹೇಳಿದ್ದರು.
ಇಂಥ ಹೇಳಿಕೆಯಿಂದ ಗಾಂಜಾ ಸೇವನೆಗೆ ಪ್ರಚೋದನೆ ನೀಡಿದ ಆರೋಪದಡಿ ನಿವೇದಿತಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಎ. ದೀಪಕ್ ಎಂಬುವರು ದೂರು ನೀಡಿದ್ದರು. ‘ತುಳಸಿಯನ್ನು ಗಾಂಜಾ ಗಿಡಕ್ಕೆ ಹೋಲಿಸಿರುವ ನಟಿ ನಿವೇದಿತಾ, ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ’ ಎಂದು ದೀಪಕ್ ದೂರಿನಲ್ಲಿ ಹೇಳಿದ್ದರು. ಅದನ್ನು ಆಧರಿಸಿಯೇ ಇದೀಗ ಎಫ್ಐಆರ್ ದಾಖಲಾಗಿದೆ.
ಅಥರ್ವ ವೇದದಲ್ಲಿ ಗಾಂಜಾ ಬಗ್ಗೆ ಉಲ್ಲೇಖಿಸಲಾಗಿದೆ. ಗಾಂಜಾ ಆಯುರ್ವೇದದ ಬೆನ್ನೆಲುಬು. ಫಕೀರರಿಂದ ಹಿಡಿದು ಕೆಳಸ್ತರದಲ್ಲಿ ಇರುವವರು ಬೇರೆ ಬೇರೆ ಕಾರಣಕ್ಕೆ ಗಾಂಜಾ ಸೇವಿಸುತ್ತಾರೆ. ಗಾಂಜಾವು ಏಡ್ಸ್ ಕಾಯಿಲೆಯನ್ನು ಗುಣಪಡಿಸುವ ಗುಣ ಹೊಂದಿದೆ. ಶಿವನ ಪೂಜೆ ಗಾಂಜಾ ಎಲೆ ಇಲ್ಲದೆ ಸಮಾಪ್ತಿಯಾಗದು. ಕ್ವೀನ್ ಎಲಿಜಬೆತ್ ಕೂಡ ಗಾಂಜಾ ಸೇವಿಸುತ್ತಿದ್ದರು. ಯೋಗಿ ಆದಿತ್ಯನಾಥ್ ಅವರು ಗಾಂಜಾ ಪರವಾಗಿ (ಉತ್ತಮವಾಗಿ ಬಳಕೆ ಮಾಡುವ ವಿಚಾರವಾಗಿ) ಮಾತನಾಡಿದ್ದಾರೆ. ಇದು ಕಾನೂನು ಬದ್ದವಾದರೆ ಅಪರಾಧ ಕಡಿಮೆಯಾಗುತ್ತದೆ. ಗಾಂಜಾ ಔಷಧಿ ಗುಣವುಳ್ಳ ಸಸಿ. ತುಳಸಿ ತರವೇ ಅದನ್ನು ಬಳಕೆ ಮಾಡಬಹುದು ಎಂದು ಹೇಳಿದ್ದರು. ಹಾಗೆಯೇ ಗಾಂಜಾದಿಂದ ಅಪರಾಧ ಆಗೋದಿಲ್ಲ ಎಂದು ಹೇಳಿದ್ದರು.