Connect with us

    DAKSHINA KANNADA

    ಅತೃಪ್ತ ಬ್ಯಾಂಕ್ ನೌಕರರೇ ಕೆಲಸ ಬಿಟ್ಟು ತೊಲಗಿ- ನೀತಿ ತಂಡದ ವಿನೂತನ ಚಳವಳಿ

    ಅತೃಪ್ತ ಬ್ಯಾಂಕ್ ನೌಕರರೇ ಕೆಲಸ ಬಿಟ್ಟು ತೊಲಗಿ- ನೀತಿ ತಂಡದ ವಿನೂತನ ಚಳವಳಿ

    ಮಂಗಳೂರು, ಡಿಸೆಂಬರ್ 25: ಬ್ಯಾಂಕ್ ಗೆ ಬಂದ ಜನಸಾಮಾನ್ಯರನ್ನು ಪ್ರಾಣಿಗಳಂತೆ ಕ್ಯಾಕರಿಸಿ ನೋಡುವ, ಜೀವಮಾನದಲ್ಲಿ ನಗುವೆನ್ನುವುದನ್ನೇ ನೋಡದ ಬ್ಯಾಂಕ್ ಸಿಬ್ಬಂದಿಗಳು ನಡೆಸುತ್ತಿರುವ ಮುಷ್ಕರದ ವಿರುದ್ಧ ಇದೀಗ ಜನ ತಿರುಗಿ ಬೀಳುವ ಲಕ್ಷಣ ಕಂಡು ಬರಲಾರಂಭಿಸಿದೆ.

    ಬೇರೆ ಯಾವ ಉದ್ಯೋಗಿಗಳಿಗೂ ಇಲ್ಲದ ಸವಲತ್ತು, ಸಂಬಳ ಪಡೆದುಕೊಳ್ಳುವ ಈ ಬ್ಯಾಂಕ್ ಉದ್ಯೋಗಿಗಳು ವರ್ಷಕ್ಕೊಮ್ಮೆ ತಮ್ಮ ಸಂಬಳ ಹೆಚ್ಚಿಸಬೇಕೆಂದು ಬ್ಯಾಂಕ್ ಬಂದ್ ಮಾಡಿ ಮುಷ್ಕರ ಮಾಡುತ್ತಿರುವುದು ಇತ್ತೀಚಿನ ಕೆಲವು ವರ್ಷಗಳಿಂದ ಹೆಚ್ಚಾಗುತ್ತಿದೆ.

    ಇಷ್ಟೊಂದು ಸಂಬಳ ,ಸವಲತ್ತು ಪಡೆಯುತ್ತಿರುವ ಈ ಉದ್ಯೋಗಿಗಳು ತಮ್ಮ ಬ್ಯಾಂಕ್ ಗೆ ಬರುವ ಗ್ರಾಹಕರನ್ನು ನಡೆಸಿಕೊಳ್ಳುವ ರೀತಿಯನ್ನು ನೆನೆಸಿಕೊಂಡರೇ ವಾಕರಿಕೆ ಬರುತ್ತಿದೆ.

    ತನ್ನ ಚೇರ್ ನಲ್ಲಿ ಕೂತ ಬಳಿಕ ಈ ಸಿಬ್ಬಂದಿಗೆ ನಗು, ಮಾತು ಎಲ್ಲವೂ ಮರೆತು ಹೋಗುತ್ತವೆ.

    ವ್ಯವಹಾರ ಜ್ಞಾನವಿಲ್ಲದೆ ಬರುವ ಜನಸಾಮಾನ್ಯನ ಜೊತೆ ಈ ಸಿಬ್ಬಂದಿಗಳು ವ್ಯವಹರಿಸುವ ರೀತಿ ನೋಡಿದಲ್ಲಿ ಈ ಸಿಬ್ಬಂದಿಗಳಿಗೆ ಸಂಬಳವಲ್ಲ, ಕತ್ತು ಹಿಡಿದು ಹೊರ ದೂಡಬೇಕೆ ಎನ್ನುವ ಚಿಂತನೆ ಬರದವರಿಲ್ಲ.

    ತಿಂಗಳಿಗೆ ಗರಿಷ್ಟವೆಂದರೆ 20 ದಿನಗಳು ದುಡಿಯುವ ಈ ಸಿಬ್ಬಂದಿಗಳು ಪ್ರತಿ ಬಾರಿಯೂ ವೇತನ ಹೆಚ್ಚಿಸಬೇಕೆಂದು ಮುಷ್ಕರ ನಡೆಸುತ್ತಿರುವುದರ ವಿರುದ್ಧ ನೀತಿ ತಂಡ ಎನ್ನುವ ಸಂಘಟನೆ ಸಾಮಾಜಿಕ ಜಾಲತಾಣದಲ್ಲೇ ಚಳವಳಿಯೊಂದನ್ನು ನಡೆಸಲು ತೀರ್ಮಾನಿಸಿದೆ.

    ಯಾವ ರೀತಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎನ್ನುವ ಘೋಷಣೆಯಂತೆ , ಅತೃಪ್ತ ಬ್ಯಾಂಕ್ ನೌಕರರೇ ಕೆಲಸ ಬಿಟ್ಟು ತೊಲಗಿ ಎನ್ನುವ ವಿನೂತನ ರೀತಿಯ ಘೋಷ ವಾಕ್ಯದೊಂದಿಗೆ ಈ ಚಳವಳಿ ನಡೆಯಲಿದೆ.

    ಈಗಾಗಲೇ ಈ ಕುರಿತ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾಂಭಿಸಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *