LATEST NEWS
ಉಡುಪಿ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿಶಾ ಜೇಮ್ಸ್

ಉಡುಪಿ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿಶಾ ಜೇಮ್ಸ್
ಉಡುಪಿ ಫೆಬ್ರವರಿ 21: ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬೆಂಗಳೂರಿನ ಕೆಎಸ್ಆರ್ ಪಿ (ರಾಜ್ಯ ಸಶಸ್ತ್ರ ಮೀಸಲು ಪಡೆ) ಕಮಾಂಡೆಂಟ್ ಆಗಿರುವ ನಿಶಾ ಜೇಮ್ಸ್ ನೇಮಕಗೊಂಡಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಕಾರಿಯಾಗಿದ್ದ ಲಕ್ಷ್ಮಣ ಬಿ. ನಿಂಬರ್ಗಿ ಅವರನ್ನು ವರ್ಗಾವಣೆಗೊಳಿಸಿ ಸರಕಾರ ಆದೇಶಿಸಿದ್ದು, ಅವರ ಜಾಗಕ್ಕೆ ನಿಶಾ ಜೇಮ್ಸ್ ಅವರು ನೆಮಕಗೊಂಡಿದ್ದಾರೆ.

ಉಡುಪಿ ಎಸ್ಪಿ ಲಕ್ಷ್ಮಣ ಬಿ ನಿಂಬರ್ಗಿ ಅವರನ್ನು ಬೆಂಗಳೂರು ನಿಸ್ತಂತು ವಿಭಾಗದ ಎಸ್ ಪಿ ಹುದ್ದೆಗೆ ವರ್ಗಾವಣೆಗೊಳಿಸಲಾಗಿದೆ.
ಉಡುಪಿ ಎಸ್ಪಿಯಾಗಿ ಅಧಿಕಾರಿ ವಹಿಸಿಕೊಂಡ ನಂತರ ಲಕ್ಷ್ಮಣ ನಿಂಬರ್ಗಿ ಜಿಲ್ಲೆಯ ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆ, ಮಹತ್ವದ ಅಪರಾಧ ಪ್ರಕರಣ ಬೇಧಿಸುವ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಶಿರೂರು ಸ್ವಾಮೀಜಿ ಅನುಮಾನಸ್ಪದ ಸಾವು, ಹುಸೈನಬ್ಬ ಅನುಮಾನಸ್ಪದ ಸಾವು, ಕೋಟ ಅವಳಿ ಕೊಲೆ ಪ್ರಕರಣಗಳನ್ನು ಸಮರ್ಥವಾಗಿ ಬೇಧಿಸಿದ್ದರು.
2013 ರ ಐಪಿಎಸ್ ಅಧಿಕಾರಿ ನಿಶಾ ಜೇಮ್ಸ್ ಅವರು ಬೆಂಗಳೂರಿನ ಕೆಎಸ್ಆರ್ ಪಿ (ರಾಜ್ಯ ಸಶಸ್ತ್ರ ಮೀಸಲು ಪಡೆ) ಕಮಾಂಡೆಂಟ್ ಆಗಿ ಸೇವೆ ಸಲ್ಲಿಸಿದ್ದರು.