ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಕ್ರಮ ಮರಳುಗಾರಿಕೆ ಮಾಹಿತಿ ಇದ್ದರೂ ಕ್ರಮಕೈಗೊಳ್ಳದ ಪೊಲೀಸರು

ಪುತ್ತೂರು ಫೆಬ್ರವರಿ 20: ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಬೀದಿಗುಡ್ಡೆ ಹಾಗೂ ಕುಲ್ಕುಂದ ಕಾಲೊನಿ ಬಳಿ ಹರಿಯುವ ಕುಮಾರಧಾರಾ ನದಿಯಿಂದ ಅಕ್ರಮವಾಗಿ ಮರಳು ಸಾಗಾಟ ನಡೆಸುವ ಪ್ರಕ್ರಿಯೆ ಆರಂಭಗೊಂಡಿದೆ.

ನದಿ ಮಧ್ಯಭಾಗದಿಂದಲೇ ಮರಳನ್ನು ಸಂಗ್ರಹಿಸಿ ಬಳಿಕ ಲಾರಿಗಳ‌ ಮೂಲಕ ಇಲ್ಲಿಂದ ಹೊರ ಪ್ರದೇಶಗಳಿಗೆ ಸಾಗಾಟ ಮಾಡಲಾಗುತ್ತಿದೆ‌. ಸ್ಥಳೀಯರ ತೀವ್ರ ವಿರೋಧದ ಹೊರತಾಗಿಯೂ ಈ ಭಾಗದಲ್ಲಿ ನಿರಂತರವಾಗಿ ಮರಳು ಕಳ್ಳತನ ನಡೆಯುತ್ತಿದೆ.

ಈ ಬಗ್ಗೆ ಗ್ರಾಮಸ್ಥರು ಸ್ಥಳೀಯ ಪೋಲೀಸ್ ಠಾಣೆಗೆ ಮಾಹಿತಿ ನೀಡಿದರೂ ಅಧಿಕಾರಿಗಳು ಹಾಗೂ ಪೋಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವ ಆರೋಪವೂ ಸ್ಥಳೀಯರಿಂದ ಕೇಳಿ ಬರುತ್ತಿದೆ.

Facebook Comments

comments