LATEST NEWS
ಸ್ಟಾಕ್ ಬ್ರೋಕರ್ ಒಬ್ಬರ ಪ್ರಶ್ನೆಗೆ ಉತ್ತರಿಸಲಾಗದೆ ಸೈಲೆಂಟ್ ಆದ ವಿತ್ತಸಚಿವೆ ನಿರ್ಮಲಾ ಸೀತಾರಾಮನ್
ಮುಂಬೈ ಮೇ 16: ಇತ್ತೀಚೆಗೆ ಮುಂಬೈನಲ್ಲಿ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ) ಆಯೋಜಿಸಿದ್ದ ‘ವಿಕ್ಷಿತ್ ಭಾರತ್ 2047 – ಭಾರತೀಯ ಹಣಕಾಸು ಮಾರುಕಟ್ಟೆಗಳ ದೃಷ್ಟಿ’ ಕಾರ್ಯಕ್ರಮದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾಗವಹಿಸಿದ್ದರು.
ಈ ವೇಳೆ ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಂಬೈನ ಸ್ಟಾಕ್ ಬ್ರೋಕರ್‌ಗಳು ಪ್ರಶ್ನೆಗಳನ್ನು ಕೇಳಿದರು. ಈ ವೇಳೆ ಸ್ಟಾಕ್ ಬ್ರೋಕರ್ ಒಬ್ಬರು ಕೇಳಿದ ಪ್ರಶ್ನೆ ಇದೀಗ ವೈರಲ್ ಆಗಿದೆ. ಸ್ಟಾಕ್ ಬ್ರೋಕರ್ ಅವರು ದಲ್ಲಾಳಿಗಳ ಮೇಲೆ ಸರ್ಕಾರ ವಿಧಿಸಿರುವ ತೆರಿಗೆಗಳ ಸಂಖ್ಯೆಯನ್ನು ಹಣಕಾಸು ಸಚಿವರನ್ನು ಕೇಳಿದರು. ವಿತ್ತ ಸಚಿವರಿಗೆ ತಮ್ಮ ಪ್ರಶ್ನೆಯಲ್ಲಿ ಬ್ರೋಕರ್, “ನಾವು ಚಿಲ್ಲರೆ ಹೂಡಿಕೆದಾರರಿಗೆ ವ್ಯಾಪಾರವನ್ನು ಮಾಡುವಾಗ ಬ್ರೋಕರ್ ಆಗಿ, ನಾವು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ), ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್‌ಟಿ) ಸೇರಿದಂತೆ ಹಲವಾರು ತೆರಿಗೆಗಳನ್ನು ಕಟ್ಟುತ್ತೆವೆ. ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (STT), ಇಂಟಿಗ್ರೇಟೆಡ್ ಗೂಡ್ಸ್ ಮತ್ತು ಸರ್ವೀಸ್ ಟ್ಯಾಕ್ಸ್ (IGST), ಸ್ಟ್ಯಾಂಪ್ ಡ್ಯೂಟಿ ಮತ್ತು ದೀರ್ಘಾವಧಿಯ ಬಂಡವಾಳ ಲಾಭ (LTCG) ತೆರಿಗೆ ಇಷ್ಟು ತೆರಿಗೆಯನ್ನು ನಾವು ಕಟ್ಟುವುದರಿಂದ ನಮಗೆ ಎನೂ ಲಾಭ ಸಿಗುವುದಿಲ್ಲ. ಆದರೆ ಭಾರತ ಸರಕಾರ ಮಾತ್ರ ನಮಗಿಂತ ಜಾಸ್ತಿ ಗಳಿಸುತ್ತಿದೆ ಎಂದರು.
“ನಾನು ಎಲ್ಲವನ್ನೂ ಹೂಡಿಕೆ ಮಾಡುತ್ತಿದ್ದೇನೆ, ಸಂಪೂರ್ಣ ಅಪಾಯವನ್ನು ತೆಗೆದುಕೊಳ್ಳುತ್ತಿದ್ದೇನೆ ಮತ್ತು ಭಾರತ ಸರ್ಕಾರವು ನನ್ನ ಎಲ್ಲಾ ಲಾಭವನ್ನು ಕಸಿದುಕೊಳ್ಳುತ್ತಿದೆ. ಎಂದ ಅವರು ಕೇಂದ್ರ ಸರಕಾರ ನಮಗೆ ಸ್ಲೀಪಿಂಗ್ ಪಾರ್ಟನರ್ ಇದ್ದಹಾಗೆ ಎಂದರು.
ಈ ಪ್ರಶ್ನೆಗೆ ಉತ್ತರಿಸಲು ನಿರ್ಮಲಾ ಸೀತಾರಾಮನ್ ತಡವರಿಸಿದ್ದು, ಕೊನೆಗೆ ನೀನು ಸ್ಪೀಪಿಂಗ್ ಪಾರ್ಟನರ್ ಅಲ್ವಾ ಅದಕ್ಕೆ ಉತ್ತರಿಸಲ್ಲ ಎಂದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Nirmala Sitharaman reaction, 'out of syllabus question aa gaya' pic.twitter.com/Ljh1PXekVx
— Gabbar (@Gabbar0099) May 16, 2024