Connect with us

  KARNATAKA

  ಕೋಯಿಕ್ಕೋಡ್ – 5ಕ್ಕೆ ಏರಿದ ನಿಫಾ ವೈರಸ್ ಸೊಂಕಿತರ ಸಂಖ್ಯೆ

  ಕೋಯಿಕ್ಕೋಡ್ ಸೆಪ್ಟೆಂಬರ್ 14: ಕೇರಳದಲ್ಲಿ ನಿಫಾ ವೈರಸ್ ಆತಂಕ ಹೆಚ್ಚಾಗಿದ್ದು, ಇದೀಗ ಕೋಯಿಕ್ಕೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬರು ಆರೋಗ್ಯ ಕಾರ್ಯಕರ್ತರಿಗೆ ನಿಪಾ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.


  ತೀವ್ರ ನಿಗಾ ಘಟಕದಲ್ಲಿರುವ ಸೋಂಕಿತ ಒಂಬತ್ತು ವರ್ಷದ ಬಾಲಕನ ಪರಿಸ್ಥಿತಿ ಗಂಭೀರವಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ರೋಗಿಯೊಂದಿಗೆ ನಿಕಟ ಸಂಪರ್ಕ ಹೊಂದಿದ ಶಂಕೆ ಹಿನ್ನೆಲೆಯಲ್ಲಿ 76 ಮಂದಿ ‘ಹೈ ರಿಸ್ಕ್’ ವಿಭಾಗದಲ್ಲಿದ್ದು, ಈ ಪೈಕಿ 13 ಮಂದಿಯಲ್ಲಿ ಸೌಮ್ಯ ರೋಗಲಕ್ಷಣ ಕಂಡುಬಂದಿದೆ. ಅವರೆಲ್ಲರೂ ಪ್ರತ್ಯೇಕ ವಾಸದಲ್ಲಿದ್ದು, ನಿಗಾ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

  ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಸೆಪ್ಟೆಂಬರ್ 24ರ ವರೆಗೆ ಕೋಯಿಕ್ಕೋಡ್‌ನಲ್ಲಿ ಜನರು ಗುಂಪು ಸೇರುವುದನ್ನು ನಿರ್ಬಂಧಿಸಲಾಗಿದೆ. ಕೇರಳದಲ್ಲಿ ನಿಪಾ ವೈರಸ್‌ನ ಬಾಂಗ್ಲಾದೇಶಿ ಉಪತಳಿ ಪತ್ತೆಯಾಗಿದ್ದು, ಇದು ಮಾನವರಿಂದ ಮಾನವರಿಗೆ ಹರಡುತ್ತದೆ. ಈ ಸೋಂಕಿಗೆ ಒಳಗಾದವರ ಸಾವಿನ ಪ್ರಮಾಣ ಹೆಚ್ಚೇ ಇರುತ್ತದೆ. ಆದರೆ ಇದರ ಸೋಂಕು ಪ್ರಸರಣ ದರ ಕಡಿಮೆ ಇರುತ್ತದೆ ಎಂದು ವೀಣಾ ಜಾರ್ಜ್‌ ಹೇಳಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply