KARNATAKA
ಕಾಟಾಚಾರಕ್ಕೆ ರಾತ್ರಿ ಕರ್ಫ್ಯೂ.. ಬದಲಾದ ಆದೇಶ ನಾಳೆಯಿಂದ ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್ ಕರ್ಫ್ಯೂ ಜಾರಿ
ಬೆಂಗಳೂರು ಡಿಸೆಂಬರ್ 23: ಕೊರೊನಾ ಸೊಂಕಿನ ಎರಡನೇ ಅಲೆ ತಡೆಯಲು ಇಂದಿನಿಂದ ಜಾರಿಗೆ ತರಲಾಗಿದ್ದ ರಾತ್ರಿ ಕರ್ಪ್ಯೂವನ್ನು ರಾಜ್ಯ ಸರಕಾರ ಬದಲಾಯಿಸಿದ್ದು, ಇಂದಿನಿಂದಲೇ ಜಾರಿಯಾಗಿದ್ದ ಕರ್ಫ್ಯೂನಲ್ಲಿ ಸಮಯ ಮತ್ತು ದಿನಾಂಕದಲ್ಲಿ ಬದಲವಾಣೆ ಮಾಡಿ ರಾಜ್ಯ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದೆ.
ಇಂದು ಬೆಳಿಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ರಾತ್ರಿ ಕರ್ಫ್ಯೂ ಇಂದು ರಾತ್ರಿ 10ರಿಂದಲೇ ಜಾರಿ ಆಗಲಿದೆ ಎಂದು ಘೋಷಿಸಿದ್ದರು. ಅದರಂತೆ ಕರ್ನಾಟಕದಲ್ಲಿ ರಾತ್ರಿ 10 ರಿಂದ ಬೆಳಗ್ಗೆ 6ರ ವರೆಗೆ ಕರ್ಫ್ಯೂ ಜಾರಿಯಲ್ಲಿರಬೇಕಿತ್ತು. ಆದರೀಗ ಈ ಆದೇಶ ಇಂದಿನಿಂದಲ್ಲ ನಾಳೆಯಿಂದ ಅಂದರೆ ಡಿಸೆಂಬರ್ 24 ರಿಂದ ಜಾರಿಗೆ ಬರಲಿದೆ. ಅಲ್ಲದೆ ರಾತ್ರಿ 11 ರಿಂದ ಬೆಳಗಿನ ಜಾವ 5ರ ವರೆಗೆ ಮಾತ್ರ ಕರ್ಫ್ಯೂ ಇರಲಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದಾರೆ.
ರಾತ್ರಿ ಕರ್ಫ್ಯೂ ಸಂದರ್ಭದಲ್ಲಿ, ದಿನಾಂಕ 24.12.2020 ರ ರಾತ್ರಿ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ನಡೆಯಲಿರುವ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು (ಮಿಡ್ ನೈಟ್ ಮಾಸ್) ಯಾವುದೇ ಅಡಚಣೆಯಿಲ್ಲದೆ ಮಾಡಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಒಟ್ಟಾರೆ ರಾಜ್ಯಸರಕಾರ ಕಾಟಾಚಾರಕ್ಕೆ ರಾತ್ರಿ ಕರ್ಪ್ಯೂ ಆದೇಶವನ್ನು ನೀಡಿದ್ದು, ರಾತ್ರಿ 11 ಗಂಟೆಯ ನಂತರ ಜನಸಂಚಾರವೇ ಕಡಿಮೆ ಇರಲಿದ್ದು, ರಾತ್ರಿ ಕರ್ಪ್ಯೂನ ಔಚಿತ್ಯವೇನು ಎಂಬ ಆಕ್ರೋಶ ವ್ಯಕ್ತವಾಗಿದೆ.
ಈ ನಡುವೆ ರಾಜ್ಯ ಸರಕಾರ ನೈಟ್ ಕರ್ಫ್ಯೂ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದು, ಇದರಲ್ಲಿ ಯಾವುದೇ ಕರ್ಪ್ಯೂ ಮಾದರಿಯ ಕಟ್ಟುನಿಟ್ಟಿನ ಕ್ರಮ ಕೈಗೊಂಡಂತೆ ಕಂಡು ಬಂದಿಲ್ಲ.
* ರಾಜ್ಯದಲ್ಲಿ ನಾಳೆಯಿಂದ ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್‍ಕಫ್ರ್ಯೂ ಜಾರಿಯಾಗಲಿದೆ.
* ಜನವರಿ 2ರಂದು ಬೆಳಗ್ಗೆ 5 ಗಂಟೆವರೆಗೆ ನೈಟ್‍ಕರ್ಫ್ಯೂ ಜಾರಿ
* ಕೈಗಾರಿಕೆ, ನೈಟ್ ಶಿಫ್ಟ್ ಆಧರಿತ ಕಂಪೆನಿಗಳಿಗೆ ಶೇ.50 ರಷ್ಡು ನೌಕರರ ಮೂಲಕ ಕಾರ್ಯಾಚರಣೆಗೆ ಅನುಮತಿ. ನೌಕರರು ಕಂಪನಿ, ಕೈಗಾರಿಕೆಗಳ ಐಡಿಕಾರ್ಡ್ ತೋರಿಸಿ ಹೋಗಬೇಕು. ಕೈಗಾರಿಕೆಗಳಿಗೆ 24/7 ಕಾರ್ಯನಿರ್ವಹಿಸಲು ಯಾವುದೇ ಅಡ್ಡಿ ಇಲ್ಲ.
* ದೂರದ ಪ್ರಯಾಣದ ಬಸ್ ಮತ್ತು ರೈಲ್ವೇಗಳಿಗೆ ಅನುಮತಿ
* ಪಿಕಪ್ ಮತ್ತು ಡ್ರಾಪ್ ಗೆ ಮಾತ್ರ ಓಲಾ, ಉಬರ್, ಆಟೋಗಳ ಸಂಚಾರಕ್ಕೆ ಅವಕಾಶ
* ಬಸ್‍ನಿಲ್ದಾಣ, ರೈಲು ಸ್ಟೇಶನ್, ಏರ್ ಪೋರ್ಟ್ ಗಳಿಂದ ಪಿಕಪ್, ಡ್ರಾಪ್ ಗೆ ಮಾತ್ರ ಅವಕಾಶವಿದ್ದು, ಅಧಿಕಾರಿಗಳು ಕೇಳಿದಾಗ ಟಿಕೆಟ್ ತೋರಿಸಬೇಕು.
* ಷರತ್ತು, ನಿರ್ಬಂಧಗಳೊಂದಿಗೆ ಹೊಸ ವರ್ಷಾಚರಣೆ, ಕ್ರಿಸ್ ಮಸ್ ಗೆ ಅವಕಾಶ
* ಸರಕು ಸಾಗಣೆ ವಾಹನಗಳಿಗೆ ಯಾವುದೇ ನಿರ್ಬಂಧವಿಲ್ಲ.