Connect with us

    LATEST NEWS

    ವಿವಾಹಿತ ಕಾನ್ಸ್​ಟೇಬಲ್ ಜೊತೆ ಮಹಿಳಾ ಪೊಲೀಸ್​​ ಸಬ್​ ಇನ್ಸ್​ಪೆಕ್ಟರ್ ಲವ್ವಿಡವ್ವಿ ಕಹಾನಿ…!

    ವಿಜಯವಾಡ, ಡಿಸೆಂಬರ್ 23: ಪ್ರೀತಿ ಪ್ರೇಮದ ಹಲವು ಘಟನೆಗಳನ್ನು ದಿನನಿತ್ಯ ಕೇಳುತ್ತಿರುತ್ತೇವೆ. ಆದರೆ ಈ ಪೊಲೀಸ್ ಕಹಾನಿ ನಡೆದಿರುವುದು ಆಂದ್ರಪ್ರದೇಶದ ನೆಲ್ಲೂರ್​ ಜಿಲ್ಲೆಯಲ್ಲಿ ವಿವಾಹಿತ ಕಾನ್ಸ್​ಟೇಬಲ್​ ಹಾಗೂ ಮಹಿಳಾ ಪೊಲೀಸ್​​ ಸಬ್​ ಇನ್ಸ್​ಪೆಕ್ಟರ್ ಲವ್ವಿಡವ್ವಿ ಪ್ರಕರಣವು ಭಾರಿ ಚರ್ಚೆಗೆ ಗ್ರಾಸವಾಗಿದೆ, ಇಬ್ಬರ ನಡುವಿನ ಸಂಬಂಧ ಜಿಲ್ಲಾ ವರಿಷ್ಠಾಧಿಕಾರಿಯ ಗಮನಕ್ಕೆ ಬಂದು ಬೇರೆ ಬೇರೆ ಠಾಣೆಗಳಿಗೆ ವರ್ಗಾವಣೆ ಮಾಡಿದರೂ ಸಹ ಅವರಿಬ್ಬರ ಲವ್​ ಕಹಾನಿ ಹಾಗೇ ಮುಂದುವರಿದಿರುವುದು ವಿವಾಹಿತ ಕಾನ್ಸ್​ಟೇಬಲ್​ ಪತ್ನಿಗೆ ನುಂಗಲಾರದ ತುತ್ತಾಗಿದೆ. ಪೋಲಿಸ್ ಲವ್ವಿಡವ್ವಿ ಕಹಾನಿ ಆರಂಭವಾದದ್ದು ಹೀಗೆ: ಮಹಿಳಾ ಎಸ್​ಐ ರೋಜಲತಾ ನೆಲ್ಲೂರ್​ ಜಿಲ್ಲೆಯ ಅತ್ಮಕುರು ಪೊಲೀಸ್​ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅದೇ ಠಾಣೆಯಲ್ಲಿ ಕಾನ್ಸ್​ಟೇಬಲ್​ ಆಗಿರುವ ಸಾಯಿ ಜತೆ ಸಲುಗೆ ಬೆಳೆಸಿಕೊಂಡಿದ್ದಾರೆ. ಇದೇ ಸಲುಗೆಯು ಇಬ್ಬರ ನಡುವೆ ವಿವಾಹೇತರ ಸಂಬಂಧವನ್ನು ಹುಟ್ಟುಹಾಕಿದೆ. ವಿಶೇಷವೆಂದರೆ ಕಾನ್ಸ್​ಟೇಬಲ್​ಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳು ಸಹ ಇದ್ದಾರೆ. ಆದರೆ, ಎಸ್​ಐ ಜತೆ ಸಂಬಂಧ ಹೊಂದಿರುವುದು ಜಿಲ್ಲಾ ಪೊಲೀಸ್​ ಸರ್ಕಲ್​ನಲ್ಲಿ ಬಹು ಚರ್ಚಿತ ವಿಷಯವಾಗಿ ಹೋಗಿದೆ.

    ಇಬ್ಬರ ಕುರಿತು ಸಾಕಷ್ಟು ದೂರುಗಳ ಬಂದ ಬಳಿಕ ಮೇಲಾಧಿಕಾರಿಗಳನ್ನು ಇಬ್ಬರನ್ನು ಬೇರೆ ಬೇರೆ ಠಾಣೆಗೆ ವರ್ಗಾವಣೆ ಮಾಡಿದ್ದಾರೆ. ಆದರೂ ತಮ್ಮ ಸಂಬಂಧವನ್ನು ನಿಲ್ಲಿಸಿಲ್ಲ. ಅಚ್ಚರಿಯೆಂದರೆ ಮಹಿಳಾ ಎಸ್​ಐ ಒಂದು ಹೆಜ್ಜೆ ಮುಂದೆಹೋಗಿ, ಕಾನ್ಸ್​ಟೇಬಲ್​ ಮನೆಯಲ್ಲೇ ವಾಸವಿದ್ದಾರೆ. ಇದರಿಂದ ಮುಜುಗರಕ್ಕೀಡಾಗಿರುವ ಕಾನ್ಸ್​ಟೇಬಲ್​ ಪತ್ನಿ ರೇಖಾ ಈ ವಿಚಾರವನ್ನು ಪೊಲೀಸ್​ ವರಿಷ್ಠಾಧಿಕಾರಿಯ ಗಮನಕ್ಕೆ ತಂದಿದ್ದಾರೆ.

    ಪೋಲಿಸ್ ಕಾನ್ಸ್​ಟೇಬಲ್ ನ ಪತ್ನಿ ಏನೇ ಮಾಡಿದರೂ ಇಬ್ಬರು ಮಾತ್ರ ತಮ್ಮ ಸಂಬಂಧವನ್ನು ನಿಲ್ಲಿಸಿಲ್ಲ. ಆದರೂ ತನ್ನ ಪ್ರಯತ್ನ ನಿಲ್ಲಿಸದ ರೇಖಾ ಅನೇಕ ಬಾರಿ ಮೇಲಾಧಿಕಾರಿಗಳಿಗೆ ದೂರು ನೀಡಿ ಇಬ್ಬರಿಗೂ ಬುದ್ಧಿ ಹೇಳುವಂತೆ ಮನವಿ ಮಾಡಿಕೊಂಡಿದ್ದಾರೆ. ಪದೇಪದೆ ದೂರು ನೀಡಿದ್ದರಿಂದ ಅಸಮಾಧಾನಗೊಂಡ ರೋಜಲತಾ, ಕಾನ್ಸ್​ಟೇಬಲ್​ ಸಾಯಿ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ. ಇತ್ತ ಪತ್ನಿಯ ಮೇಲೆ ಕೋಪಗೊಂಡ ಸಾಯಿ ಆಕೆಯನ್ನು ಹಿಗ್ಗಾಮುಗ್ಗಾ ಬೈದು ಎಚ್ಚರಿಕೆ ನೀಡಿದ್ದಾರೆ.
    ಇಷ್ಟೆಲ್ಲದರ ನಡುವೆ ಈ ಘಟನಾವಳಿಗಳೆಲ್ಲ ಮಾಧ್ಯಮಗಳಿಗೆ ಸೋರಿಕೆಯಾಗಿ ಎಲ್ಲೆಡೆ ಪ್ರಚಾರವಾಗಿದೆ. ಇದೇ ವಿಚಾರ  ರಾಜ್ಯಾದ್ಯಂತ ಚರ್ಚೆಯಾಗುತ್ತಿದೆ, ಊರಿಗೆಲ್ಲಾ ಬುದ್ಧಿ ಹೇಳುವ ಈ ಪೋಲಿಸ‌್ ಲವ್ವಿಡವ್ವಿ ಎಲ್ಲಿ ಕೊನೆಯಾಗೊತ್ತೊ ಕಾದುನೋಡಬೇಕು.

    Share Information
    Advertisement
    Click to comment

    You must be logged in to post a comment Login

    Leave a Reply