Connect with us

KARNATAKA

ಮೇ 4 ರವರೆಗೆ ರಾಜ್ಯದಲ್ಲಿ ವೀಕೆಂಡ್ ಲಾಕ್ ಡೌನ್…ನೈಟ್ ಕರ್ಪ್ಯೂ ಜಾರಿ

ಬೆಂಗಳೂರು ಎಪ್ರಿಲ್ 20: ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ಬೆನ್ನಲ್ಲೆ ರಾಜ್ಯ ಸರಕಾರ ನೂತನ ಕೊರೊನಾ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದ್ದು, ರಾಜ್ಯದಲ್ಲಿ ನಾಳೆಯಿಂದ ನೈಟ್ ಕರ್ಪ್ಯೂ ಜಾರಿ ಮಾಡಿದ್ದು, ಜೊತೆಗೆ ವೀಕೆಂಡ್ ಲಾಕ್‍ಡೌನ್ ನ್ನು ಘೋಷಿಸಿದೆ.


ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಗ್ಗೆ 6 ಗಂಟೆವರೆಗೆ ವೀಕೆಂಡ್ ಲಾಕ್ ಡೌನ್ ಇರಲಿದೆ. ವೀಕೆಂಡ್ ಲಾಕ್ ದಿನ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರ ಹಣ್ಣು, ತರಕಾರಿ, ದಿನಸಿ ಖರೀದಿ ಅವಕಾಶ ನೀಡಲಾಗಿದೆ.
ಕೆಲವೇ ಜಿಲ್ಲೆಗಳಿಗೆ ಮಾತ್ರ ಇದ್ದ ನೈಟ್ ಕರ್ಪ್ಯೂವನ್ನು ರಾಜ್ಯಾದ್ಯಂತ ವಿಸ್ತರಿಸಲಾಗಿದ್ದು, ರಾತ್ರಿ 10 ಗಂಟೆ ಬದಲಾಗಿ 9 ಗಂಟೆಗೆ ಕೊರೊನಾ ಕರ್ಫ್ಯೂ ಜಾರಿಗೆ ತರಲಾಗಿದೆ.