LATEST NEWS
ಜನರ ಮೇಲೆ ರಾತ್ರಿ ಕರ್ಫ್ಯೂ ಹೇರಿಕೆ…ಹಗಲು ಅದೇ ಜನರ ಸೇರಿಸಿ ರಾಜಕೀಯ ಸಮಾವೇಶ – ಸರಕಾರಗಳ ಆದೇಶ ಟೀಕಿಸಿದ ಸಂಸದ ವರುಣ್ ಗಾಂಧಿ
ಉತ್ತರ ಪ್ರದೇಶ: ಹಗಲು ರಾಜಕೀಯ ಸಮಾವೇಶಗಳನ್ನು ನಡೆಸಿ ರಾತ್ರಿ ಕರ್ಪ್ಯೂ ಹೇರಿ ಜನರನ್ನು ಮನೆಯಲ್ಲಿ ಕುರಿಸುತ್ತಿರುವ ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಆದೇಶಕ್ಕೆ ಬಿಜೆಪಿ ಸಂಸದ ವರುಣ್ ಗಾಂಧಿ ಕಿಡಿಕಾರಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು ಸೋಂಕನ್ನು ತಡೆಗಟ್ಟುವುದು ನಮ್ಮ ಆದ್ಯತೆಯೇ ಅಥವಾ ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದು ನಮಗೆ ಮುಖ್ಯವೇ ಎಂಬುದನ್ನು ನಿರ್ಧರಿಸಬೇಕಾಗಿದೆ. ಚುನಾವಣೆ ಸಂದರ್ಭದಲ್ಲಿ ಶಕ್ತಿ ಪ್ರದರ್ಶನ ಮಾಡಲು ಜನರನ್ನು ಸೇರಿಸುವ ಬದಲು, ಅವರುಮನೆಯಲ್ಲಿಯೇ ಇರಲು ಪ್ರೇರೇಪಿಸಬೇಕು ಎಂದವರು ಕಿವಿಮಾತು ಹೇಳಿದ್ದಾರೆ.
ಹಗಲು ರಾಜಕೀಯ ಸಮಾವೇಶಕ್ಕಾಗಿ ಲಕ್ಷಾಂತರ ಜನರನ್ನು ಒಟ್ಟುಗೂಡಿಸುತ್ತಾರೆ. ನಂತರ ರಾತ್ರಿಯಲ್ಲಿ ಕರ್ಫ್ಯೂ ಹೇರುತ್ತಾರೆ. ಇದೇನು ಎಂದು ಸಾಮಾನ್ಯ ಜನರಿಗೆ ಅರ್ಥವಾಗುತ್ತಿಲ್ಲ ಎಂದು ಅವರು ಸರ್ಕಾರಗಳನ್ನು ಟೀಕಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ರಾಷ್ಟ್ರೀಯ ನಾಯಕರು ದೌಡಾಯಿಸಿದ್ದು, ಜನ ವಿಶ್ವಾಸ ಯಾತ್ರೆ ಸೇರಿದಂತೆ ಹಲವು ಬಹಿರಂಗ ಸಮಾವೇಶಗಳಲ್ಲಿ ಭಾಗವಹಿಸಿದ್ದಾರೆ.