Connect with us

    LATEST NEWS

    ನೈಜೀರಿಯಾ ಸೇನೆಯ ಎಡವಟ್ಟಿಗೆ 85 ಮಂದಿ ನಾಗರೀಕರ ಸಾವು…!!

    ಅಬುಜಾ ಡಿಸೆಂಬರ್ 06: ನೈಜಿರೀಯಾ ಸೇನೆಯ ಡ್ರೋಣ್ ಒಂದು ಗುರಿತಪ್ಪಿ 85ಕ್ಕೂ ಅಧಿಕ ನಾಗರೀಕರನ್ನು ಬಲಿ ಪಡೆದಿದೆ. ನೈಜೀರಿಯಾದ ಕಡುನಾ ರಾಜ್ಯದ ತುಡುನ್‌ ಬಿರಿ ಗ್ರಾಮದ ಬಳಿ ಭಯೋತ್ಪಾದಕರನ್ನು ಗುರಿಯಾಗಿಸಿ ದಾಳಿ ನಡೆಸಲಾಗಿತ್ತು. ಆದರೆ ಸೇನೆ ಹಾರಿಸಿದ್ದ ಡ್ರೋನ್ ಗುರಿ ತಪ್ಪಿದ್ದು, ನಾಗರಿಕರ ಮೇಲೆ ದಾಳಿ ಮಾಡಿದೆ. ನೈಜೀರಿಯಾದ ಸಂಘರ್ಷದ ವಲಯದಲ್ಲಿ ನಡೆದ ಮಾರಣಾಂತಿಕ ದಾಳಿ ಬಗ್ಗೆ ತನಿಖೆ ನಡೆಸಲು ದೇಶದ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ.


    ಶಸ್ತ್ರಸಜ್ಜಿತ ಗುಂಪುಗಳನ್ನು ಗುರಿಯಾಗಿಟ್ಟುಕೊಂಡು ಡ್ರೋನ್‌ ದಾಳಿ ನಡೆಸಲಾಗಿತ್ತು, ಆದರೆ ಅದು ಹಬ್ಬವನ್ನು ಆಚರಿಸುತ್ತಿರುವಾಗ ಆಕಸ್ಮಿಕವಾಗಿ ತುಡುನ್ ಬಿರಿ ಗ್ರಾಮದ ಮೇಲೆ ಬಿದ್ದಿದೆ. ಇದುವರೆಗೆ 85 ಮೃತದೇಹಗಳನ್ನು ತೆಗೆಯಲಾಗಿದ್ದು, ಶೋಧ ಇನ್ನೂ ಮುಂದುವರೆದಿದೆ ಎಂದು ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆ (NEMA) ಹೇಳಿಕೆಯಲ್ಲಿ ತಿಳಿಸಿದೆ.

    ಇನ್ನೂ 66 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು NEMA ಹೇಳಿದೆ, ಆದರೆ ತುರ್ತು ಅಧಿಕಾರಿಗಳು ಇನ್ನೂ ಹಳ್ಳಿಯನ್ನು ತಲುಪಲು ಉದ್ವಿಗ್ನತೆಯನ್ನು ಶಾಂತಗೊಳಿಸಲು ಸಮುದಾಯದ ಮುಖಂಡರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.
    ನೈಜೀರಿಯಾದ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ತೌರೀದ್ ಲಗ್ಬಾಜಾ ಅವರು ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು ಡ್ರೋನ್ ದಾಳಿಗೆ ಕ್ಷಮೆಯಾಚಿಸಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ. ತಪ್ಪಾದ ಲೆಕ್ಕಾಚಾರದ ವೈಮಾನಿಕ ದಾಳಿಯ ಘಟನೆಗಳು ದೇಶದಲ್ಲಿ ಆತಂಕಕಾರಿ ಆಯಾಮವನ್ನು ಪಡೆದುಕೊಳ್ಳುತ್ತಿದೆ ಎಂದು ನೈಜೀರಿಯಾದ ಮಾಜಿ ಉಪಾಧ್ಯಕ್ಷ ಮತ್ತು ಈ ವರ್ಷದ ಚುನಾವಣೆಯಲ್ಲಿ ಪ್ರಮುಖ ವಿಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಅತಿಕು ಅಬುಬಕರ್ ಅಭಿಪ್ರಾಯಪಟ್ಟಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply