Connect with us

KARNATAKA

ಎನ್‌ಐಎ ಅಧಿಕಾರಿಗಳ ಕಾರ್ಯಾಚರಣೆ : ಬೆಂಗಳೂರಿನಲ್ಲಿ ಇಬ್ಬರು ಉಗ್ರರ ಬಂಧನ.

ಬೆಂಗಳೂರು, ಅಕ್ಟೋಬರ್ 8: ಬೆಂಗಳೂರು ಮಾಡ್ಯೂಲ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​ಐಎ ಅಧಿಕಾರಿಗಳು ಮತ್ತಿಬ್ಬರು ಆರೋಪಿಗಳನ್ನು ಬಂಧನ ಮಾಡಿದ್ದಾರೆ.

ಬಂಧಿತ ಆರೋಪಿಗಳನ್ನು ಅಹಮ್ಮದ್​ ಅಬ್ದುಲ್​ ಕೇಡರ್​ ಮತ್ತು ಇರ್ಫಾನ್​​​ ನಾಸಿರ್​​ ಬಂಧಿತ ಆರೋಪಿಗಳಾಗಿದ್ದಾರೆ. ಅಹ್ಮದ್​ ಅಬ್ದುಲ್​ ಕೇಡರ್​ ಚೆನ್ನೈನ ಬ್ಯಾಂಕ್​​ನಲ್ಲಿ ವ್ಯವಹಾರ ವಿಶ್ಲೇಷಕ ಹಾಗೂ ಇರ್ಫಾನ್​ ನಾಸಿರ್​ ಬೆಂಗಳೂರಿನಲ್ಲಿ ಅಕ್ಕಿ ವ್ಯಾಪಾರಿಯಾಗಿ ಕೆಲಸ ಮಾಡುತ್ತಿದ್ದರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ತಿಳಿಸಿದೆ.

ಇಬ್ಬರು ಆರೋಪಿಗಳನ್ನ ಇಂದು ಬೆಂಗಳೂರಿನ ವಿಶೇಷ ಎನ್​ಐಎ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಮುಂದಿನ 10 ದಿನಗಳ ಕಾಲ ವಿಚಾರಣೆಗೋಸ್ಕರ ಕಸ್ಟಡಿಗೆ ನೀಡಲಾಗಿದೆ. ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಸುವ ಕಾರ್ಯ ಮುಂದುವರೆದಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ತಿಳಿಸಿದೆ.