Connect with us

LATEST NEWS

ನ್ಯೂಜಿಲೆಂಡ್ ಸುನಾಮಿ ಅಪ್ಪಳಿಸುವ ಸಾಧ್ಯತೆ – ಸಮುದ್ರ ತೀರಕ್ಕೆ ಬರುತ್ತಿರುವ ಸುನಾಮಿ ಅಲೆಗಳು

ನ್ಯೂಜಿಲೆಂಡ್ ಮಾರ್ಚ್ 5: ಪೆಸಿಫಿಕ್​ ಸಾಗರದಲ್ಲಿ ಉಂಟಾದ ಪ್ರಬಲ ಭೂಕಂಪಗಳಿಂದಾಗಿ ನ್ಯೂಜಿಲೆಂಡ್ ನ ಕೆಲವು ಪ್ರದೇಶಗಳಿಗೆ ಸುನಾಮಿ ಭೀತಿ ಎದುರಾಗಿದ್ದು, ಈಗಾಗಲೇನ್ಯೂಜಿಲೆಂಡ್​, ನ್ಯೂ ಕಲೆಡೊನಿಯಾ ಮತ್ತು ವನೌಟು ರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಸಾವಿರಾರು ನಿವಾಸಿಗಳನ್ನು ಸುರಕ್ಷಿತ ತಾಣಕ್ಕೆ ಸ್ಥಳಾಂತರಿಸಲಾಗುತ್ತಿದೆ.


ನ್ಯೂಜಿಲೆಂಡ್​ನಲ್ಲಿ ಉತ್ತರ ದ್ವೀಪದ ಕಡೆ ಹರಡಿಕೊಂಡಿರುವ ಸಮುದಾಯಗಳಿಗೆ ಸುನಾಮಿ ಅಪ್ಪಳಿಸುವ ಸಾಧ್ಯತೆ ಇದ್ದು, ಅಲ್ಲಿನ ನಿವಾಸಿಗಳು ಕೂಡಲೇ ಸ್ಥಳವನ್ನು ಖಾಲಿ ಮಾಡಲು ಎಚ್ಚರಿಕೆ ನೀಡಲಾಗಿದೆ. ಒಟ್ಟು ಮೂರು ಬಾರಿ ಒಂದೇ ಸ್ಥಳದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಮೊದಲ ಬಾರಿ 7.3, ಎರಡನೇ ಬಾರಿ 7.4 ಮತ್ತು ಮೂರನೇ ಬಾರಿ 8.1ರ ತೀವ್ರತೆ ರಿಕ್ಟರ್​ ಮಾಪಕದಲ್ಲಿ ದಾಖಲಾಗಿದೆ.


3 ಮೀಟರ್​ (10 ಅಡಿ) ಎತ್ತರದ ಸುನಾಮಿ ಅಲೆಗಳ ಅಪ್ಪಳಿಸುವಿಕೆ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಇನ್ನು ದಕ್ಷಿಣ ಪೆಸಿಫಿಕ್ ಪ್ರಬಲ ಭೂಕಂಪಗಳ ನಂತರ ಸುನಾಮಿ ಅಲೆಗಳನ್ನು ಗಮನಿಸಲಾಗಿದೆ. ನ್ಯೂಜಿಲೆಂಡ್ ಕರಾವಳಿಯಲ್ಲಿ ಬೆಳಿಗ್ಗೆ 8: 28ಕ್ಕೆ ಸುಮಾರು 1,000 ಕಿಲೋಮೀಟರ್ (640 ಮೈಲಿ) ಭೂಕಂಪನ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ವನೌಟು ಮತ್ತು ನ್ಯೂ ಕ್ಯಾಲೆಡೋನಿಯಾ ಅತಿದೊಡ್ಡ ಅಲೆಗಳನ್ನು ಅನುಭವಿಸುವ ಸಾಧ್ಯತೆಯಿದೆ ಎಂದು ಹೇಳಿದೆ. ಸಂಭವನೀಯ ಸುನಾಮಿ ಅಲೆಗಳು ಮೂರು ಮೀಟರ್​ವರೆಗೆ ಎತ್ತರವಿರಲಿದೆ.

Advertisement Advertisement
Click to comment

You must be logged in to post a comment Login

Leave a Reply