Connect with us

LATEST NEWS

ಮಂಗಳೂರು ಸಿಟಿ ಬಸ್‌ ಗೆ ಹೊಸ ಟಚ್ ಚಲೋ ಆ್ಯಪ್ ಲೋಕಾರ್ಪಣೆ

ಮಂಗಳೂರು ಸಿಟಿ ಬಸ್‌ ಗೆ ಹೊಸ ಟಚ್ ಚಲೋ ಆ್ಯಪ್ ಲೋಕಾರ್ಪಣೆ

ಮಂಗಳೂರು, ಫೆಬ್ರವರಿ 25 : ಮಂಗಳೂರು ನಗರದ ಸಾರಿಗೆ ವ್ಯವಸ್ಥೆಯಲ್ಲಿ ಒಂದು ಅತ್ಯುತ್ತಮ ಕೊಡುಗೆ ನೀಡಲು ದಕ್ಷಿಣ ಕನ್ನಡ ಜಿಲ್ಲಾ ಬಸ್ ಮಾಲಕರು ನಿರ್ಧರಿಸಿದ್ದಾರೆ.

ಈ ಹಿನ್ನಲೆಯಲ್ಲಿ ಇದೇ ಮೊದಲ ಬಾರಿಗೆ ಚಲೋ ಬಸ್‌ ಆ್ಯಪ್‌ ಆರಂಭಿಸಲಾಗಿದೆ.

ಚಲೋ ಎಂಬ ಸಂಸ್ಥೆ ಈ ಆ್ಯಪನ್ನು ಅಭಿವೃದ್ಧಿಪಡಿಸಿದೆ, ದಕ್ಷಿಣ ಕನ್ನಡ ಬಸ್‌ ಮಾಲಕರ ಒಕ್ಕೂಟದ ಸಹಯೋಗದೊಂದಿಗೆ ಮಂಗಳೂರು ನಗರದಲ್ಲಿ ಈ ಆ್ಯಪ್ ಇಂದಿನಿಂದ ಕಾರ್ಯಾರಂಭವಾಗಿದೆ.

ಇಂದು ಮಂಗಳೂರಿಲ್ಲಿ ನಡೆದ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ನೂತನ ಆ್ಯಪ್‌ಗೆ ಚಾಲನೆ ನೀಡಿದ್ದಾರೆ.

ಈ ಆ್ಯಪ್‌ನ ಮುಖಾಂತರ ಜನರ ಸಮಯವನ್ನು ಉಳಿಸಬಹುದಾಗಿದೆ. ಇನ್ನು ಹೊರಗಿನವರು, ಪ್ರವಾಸಿಗರು ನಗರಕ್ಕೆ ಬಂದಾಗ ಅವರಿಗೆ ಯಾವುದೇ ಅನಾನುಕೂಲತೆಗಳು ಆಗದಂತೆ, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಈ ಆ್ಯಪ್‌ ಸಹಕಾರಿಯಾಗಲಿದೆ. ಈ ಆ್ಯಪ್ ನಲ್ಲಿ ಟ್ರಿಪ್‌ ಪ್ಲಾನರ್‌ ಇದ್ದು, ಇಲ್ಲಿ ಪ್ರತಿಯೊಂದು ಮಾಹಿತಿಗಳು ಲಭ್ಯವಾಗಿದೆ.

ಎಲ್ಲಾ ರಂಗಗಳಲ್ಲೂ ಇಂದು ತಂತ್ರಜ್ಞಾನ ಸಾಕಷ್ಟು ಮುಂದುವರಿದಿದ್ದು, ಇದೀಗ ಸಾರಿಗೆ ಸಂಸ್ಥೆಯಲ್ಲೂ ತಂತ್ರಜ್ಞಾನ ಕಾಲಿಟ್ಟಿದೆ.

ಇದೇ ಮಾರ್ಚ್‌ ಮೊದಲ ವಾರದಿಂದ ಈ ಟಿಕೆಟಿಂಗ್, ಚಲೋ ಟಿಕೆಟಿಂಗ್‌, ಸ್ಮಾರ್ಟ್‌ ಕಾರ್ಡ್ ಉಪಯೋಗವನ್ನು ಪಡೆಯಬಹುದು.

ಹಂತ ಹಂತವಾಗಿ ಸಾರಿಗೆ ವ್ಯವಸ್ಥೆ ಬದಲಾವಣೆ ಮಾಡಲು ಇದು ಸಹಾಕಾರಿಯಾಗಲಿದೆ ಎನ್ನುತ್ತಾರೆ ಮಂಗಳೂರು ನಗರ ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ದಿಲ್ರಾಜ್ ಆಳ್ವರು.

ನಗರದಲ್ಲಿ ಸದ್ಯ 350 ಸಿಟಿ ಬಸ್ ಗಳು ಸಂಚರಿಸುತ್ತಿದ್ದು, ಆ್ಯಪ್ನ ನ ಮೊದಲ ಭಾಗವಾಗಿ 320 ಬಸ್ ಗಳಲ್ಲಿ ಈಗಾಗಲೇ ಜಿಪಿಎಸ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ಇದರಿಂದಾಗಿ ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯುವುದು ತಪ್ಪುದಲ್ಲದೆ, ಸಮಯ ವ್ಯರ್ಥವಾಗುವುದು ತಪ್ಪಲಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *