LATEST NEWS
ಬರ್ತಾ ಇದೆ ಹೊಚ್ಚ ಹೊಸ ಕಾರ್ಯಕ್ರಮ ‘ಮಿರರ್ ಇಮೇಜ್’

ಬರ್ತಾ ಇದೆ ಹೊಚ್ಚ ಹೊಸ ಕಾರ್ಯಕ್ರಮ ‘ಮಿರರ್ ಇಮೇಜ್’
ಮಂಗಳೂರು ಮಾರ್ಚ್ 15: ಇಷ್ಟು ದಿನಗಳ ಕಾಲ ಲೇಟೆಸ್ಟ್ ನ್ಯೂಸ್.. ಸ್ಪೆಷಲ್ ಸ್ಟೋರಿಸ್.. ಗಾಸಿಪ್ ಅದೂ-ಇದು ಅಂತ ಕಲರ್ ಫುಲ್ ಸುದ್ದಿಗಳನ್ನು ನಿಮ್ಮ ಮನೆ-ಮನಗಳಿಗೆ ತಲುಪಿಸುತ್ತಿದ್ದ, ‘ದಿ.ಮಂಗಳೂರು ಮಿರರ್’ ಮುಕುಟಕ್ಕೆ ಮತ್ತೊಂದು ಗರಿ ಮೂಡಲಿದೆ.
‘ದಿ ಮಂಗಳೂರು ಮಿರರ್’ ಯೂಟ್ಯೂಬ್ ಚಾನೆಲ್ ನಲ್ಲಿ ಇನ್ನು ಮುಂದೆ ಕೋಸ್ಟಲ್ ವುಡ್ ಕಲಾವಿದರ ಕಲರವ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು, ಸಾಮಾಜಿಕ ಜಾಲತಾಣಗಳಲ್ಲಿ ಗುರುತಿಸಿಕೊಂಡ ವಿಭಿನ್ನ ಪ್ರತಿಭೆಗಳ ಅನುಭವ ಕಥನ ನೋಡುವ ಭಾಗ್ಯ ನಿಮ್ಮದಾಗಲಿದೆ. ಹಾಡು, ಹರಟೆ, ಮಸ್ತಿ, ಚರ್ಚೆ, ಭಾವನೆಗಳು, ಸಂವೇದನೆಗಳು ಹೀಗೆ ಇಲ್ಲಿ ಎಲ್ಲವೂ ಇರುತ್ತೆ.

ಇತ್ತೀಚಿನ ಧಾವಂತದ ದಿನಗಳಲ್ಲಿ ಮಾಹಿತಿಯೊಂದಿಗೆ ಮನರಂಜನೆ ಕೂಡ ಅತ್ಯಗತ್ಯ. ಇಲ್ಲಿ ಕೋಸ್ಟಲ್ ವುಡ್ -ಸ್ಯಾಂಡಲ್ ವುಡ್ ನಟ-ನಟಿಯರು, ನಿರ್ದೇಶಕ-ನಿರ್ಮಾಪಕರುಗಳು, ಹಾಸ್ಯ ನಟ-ನಟಿಯರು, ಆಗತಾನೆ ಚಿತ್ರರಂಗಕ್ಕೆ ಕಾಲಿಟ್ಟ ಉದಯೋನ್ಮುಖ ಪ್ರತಿಭೆಗಳು, ಕಲೆ, ಸಾಹಿತ್ಯ, ಸಂಗೀತ, ನೃತ್ಯ ಹೀಗೆ ವಿವಿಧ ಕ್ಷೇತ್ರಗಳಲ್ಲಿನ ಸಾಧಕರು, ಹಾಗೆ ಇನ್ನಷ್ಟು ಸಾಧಿಸುವ ಛಲ ಹೊಂದಿ, ಸಾಧನೆಯ ಹಾದಿಯಲ್ಲಿರುವ ಸಾಧಕರುಗಳ ಜೊತೆ ನಡೆಸುವ ಕಾಡು ಹರಟೆಯ ಗುಚ್ಛ ಇನ್ನುಮುಂದೆ ‘ಮಿರರ್ ಇಮೇಜ್’ ನಲ್ಲಿ.
‘ದಿ ಮಂಗಳೂರು ಮಿರರ್’ ಅಧೀಕೃತ ಯುಟ್ಯೂಬ್ ಚಾನೆಲ್ ಜನರ ಪ್ರೀತಿಗೆ ಪಾತ್ರವಾಗಿ ಈಗಾಗಲೇ 1 ಕೋಟಿ ವೀಕ್ಷಣೆಗೆ ಒಳಪಟ್ಟಿದೆ. ಆನ್ ಲೈನ್ ಸುದ್ದಿ ಪ್ರಸಾರ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ‘ಡೈಲಿ ಹಂಟ್’ ಹಾಗೂ ಶಿಯೋಮಿ ಎಮ್ ಐ ಜೊತೆ ಟೈಯಪ್ ಮಾಡಿಕೊಂಡಿರುವ ಕರಾವಳಿಯ ಹೆಮ್ಮೆಯ ವೆಬ್ ಸೈಟ್ ‘ದಿ ಮಂಗಳೂರು ಮಿರರ್’ ಗೆ ಪ್ರತೀ ತಿಂಗಳು 2 ಲಕ್ಷ ಹೊಸ-ಹೊಸ ಓದುಗರು ಭೇಟಿ ನೀಡುತ್ತಾರೆ. ಅಂದಿನಿಂದ ಇಂದಿನವರೆಗೆ ನಮ್ಮ ಬೆಳವಣಿಗೆ ಅಮೋಘ.
ನೀವು ಪ್ರೋತ್ಸಾಹಿಸಿ ಬೆಳೆಸಿದ ‘ದಿ ಮಂಗಳೂರು ಮಿರರ್’ ಯುಟ್ಯೂಬ್ ಚಾನೆಲ್ ನಲ್ಲಿ ಬರ್ತಾ ಇದೆ ಹೊಚ್ಚ ಹೊಸ ಕಾರ್ಯಕ್ರಮ ‘ಮಿರರ್ ಇಮೇಜ್’. ನಿಮ್ಮ ಪ್ರೋತ್ಸಾಹ ನಮಗೆ ಎಂದೆಂದಿಗೂ ಅತ್ಯಗತ್ಯ. ಸಿನಿರಸಿಕರು, ಕಲಾ ಪ್ರೋತ್ಸಾಹಕರು ಕೂಡಲೇ ಸಬ್ ಸ್ಕ್ರೈಬ್ ಮಾಡಿ: