ಮಂಗಳೂರು ರಸ್ತೆಯಲ್ಲಿ ಮೀನಿನ ನೀರು – ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

ಮಂಗಳೂರು ಮಾರ್ಚ್ 15 : ಸ್ವಚ್ಚ ನಗರಿ ಎಂದು ಕರೆಯಲ್ಪಡುವ ಮಂಗಳೂರಿನಲ್ಲಿ ಮೀನಿನ ತ್ಯಾಜ್ಯ ನೀರು ನಗರದ ಅಂದವನ್ನು ಹಾಳು ಮಾಡುತ್ತಿದೆ. ಮಂಗಳೂರಿನ ರಸ್ತೆಗಳಲ್ಲಿ ಮೀನು ತುಂಬಿದ ಲಾರಿಗಳು ಮೀನಿನ ತ್ಯಾಜ್ಯ ನೀರನ್ನು ನಗರದ ರಸ್ತೆಗಳಲ್ಲಿ ಚೆಲ್ಲುತ್ತಾ ಹೋಗುತ್ತಿದ್ದು, ನಗರದಾದ್ಯಂತ ದುರ್ವಾಸನೆ ಕಾರಣವಾಗಿದೆ.

ದೇಶದಲ್ಲಿ ಸ್ವಚ್ಚ ನಗರಿ ಎಂದು ಹೆಸರು ಪಡೆದಿರುವ ಮಂಗಳೂರು ನಗರ ಈ ಬಾರಿ ಕೇಂದ್ರ ಸರಕಾರ ನಡೆಸುವ ಸ್ವಚ್ಚ ಸರ್ವೇಕ್ಷಣೆಯಲ್ಲಿ ಕಸ ವಿಲೇವಾರಿಯಲ್ಲಿ ಮೊದಲ ಸ್ಥಾನವನ್ನು ಪಡೆದಿದೆ. ಆದರೆ ಸ್ವಚ್ಚ ನಗರ ಎಂಬ ಹೆಸರನ್ನು ಮಂಗಳೂರಿನ ಮೀನಿನ ಲಾರಿಗಳು ಹಾಳು ಮಾಡುತ್ತಿವೆ. ಮೀನಿನ ತ್ಯಾಜ್ಯ ನೀರನ್ನು ಮಂಗಳೂರಿನ ದಕ್ಕೆಯಿಂದ ಪಾಂಡೆಶ್ವರ ಎಮ್ಮೆಕೆರೆ ಮಂಕಿ ಸ್ಟಾಂಡ್ ,ಮಂಗಳಾದೆವಿ, ಜೆಪ್ಪು ಮಾರ್ಕೆಟ್, ಮೊರ್ಗನ್ಸ್ ಗೆಟ್ ಮಹಾಕಾಳಿಪಡ್ಪು ,ಜೆಪ್ಪಿನಮೊಗರು ಆಗಿ ರಾಸ್ಟ್ರಿಯ ಹೆದ್ದಾರಿಯ ಮೂಲಕ ತೊಕ್ಕೊಟ್ಟು ಕಡೆ ಹೊಗುವ ಲಾರಿ ಮತ್ತು ಟೆಂಪೊಗಳಿಂದ ರಸ್ತೆ ಗೆ ಸುರಿದುಕೊಂಡು ಹೋಗುತ್ತಿದ್ದಾರೆ. ಪೊಲೀಸ್ ಇಲಾಖೆಯ ಎಚ್ಚರಿಕೆ ನಡುವೆಯೂ ಯಾವುದೇ ಕೇರ್ ಮಾಡದೇ ಮತ್ತೆ ರಸ್ತೆಯುದ್ದಕ್ಕೂ ಮೀನಿನ ತ್ಯಾಜ್ಯ ನೀರನ್ನು ಸುರಿದುಕೊಂಡು ಹೋಗುತ್ತಿದ್ದಾರೆ.

ಈ ಮೀನಿನ ತ್ಯಾಜ್ಯ ನೀರಿನಿಂದಾಗಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಸಮಸ್ಯೆ ಉಂಟಾಗುತ್ತಿದೆ. ಅಲ್ಲದೆ ರಸ್ತೆಯಲ್ಲಿ ನಡೆದಾಡುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗುವಂತಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಮೀನಿನ ನೀರಿನ ವಾಸನೆ ನಿಲ್ಲಿಸಿ ಪ್ರಕೃತಿದತ್ತವಾಗಿ ಬಂದ ಗಾಳಿಯ ಸೇವನೆಗೆ ಅವಕಾಶವನ್ನು ಮಾಡಿಕೊಡಿ ಎಂದು ಪರಿಸರದ ನಾಗರಿಕರು ವಿನಂತಿಸಿದ್ದಾರೆ.

VIDEO