LATEST NEWS
ಹಿರಿಯ ವಯಸ್ಸಿನವರಿಗೂ ಯಾವುದೇ ಅಡ್ಡಪರಿಣಾಮ ಬೀರದ ಫೈಜರ್ ಮತ್ತು ಬಯೋಎನ್‌ಟೆಕ್ ನ ಕೊರೊನಾ ಲಸಿಕೆ
ನ್ಯೂಯಾರ್ಕ್ : ವಿಶ್ವವನ್ನೆ ತಲ್ಲಣಗೊಳಿಸಿರುವ ಮಾರಣಾಂತಿಕ ಕಾಯಿಲೆ ಕೊರೊನಾ ವಿರುದ್ದ ಹೋರಾಡಲು ವಿಶ್ವದ ವಿವಿಧ ದೇಶಗಳಲ್ಲಿ ಲಸಿಕೆ ಕಂಡು ಹಿಡಿಯಲು ವಿಜ್ಞಾನಿಗಳು ಕಾರ್ಯನಿರತರಾಗಿದ್ದಾರೆ. ಈಗಾಗಲೇ ವಿಶ್ವದ ಅನೇಕ ದೇಶಗಳಲ್ಲಿ ಅಭಿವೃದ್ದಿ ಪಡಿಸಲಾದ ವಿವಿಧ ಲಸಿಕೆಗಳು ತಮ್ಮ ಎರಡನೇ ಹಂತದ ಟ್ರಯಲ್ ಗಳನ್ನು ಪೂರ್ಣಗೊಳಿಸಿವೆ.
ಈ ನಡುವೆ ಮತ್ತೊಂದು ಸಂತೋಷದ ಸುದ್ದಿ ಬಂದಿದ್ದು, ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಪ್ರಮುಖ ಔಷಧಿ ಕಂಪೆನಿಗಳಾದ ಫೈಜರ್ ಮತ್ತು ಬಯೋಎನ್‌ಟೆಕ್ ಸಂಸ್ಥೆಗಳು ತಾವು ಅಭಿವೃದ್ಧಿಪಡಿಸಿರುವ ಕೊರೊನಾ ಲಸಿಕೆ ಶೇಕಡ 95ರಷ್ಟು ಪರಿಣಾಮಕಾರಿ ಎಂದು ಘೋಷಿಸಿವೆ. ಅದರಲ್ಲೂ ಹಿರಿಯ ವಯಸ್ಸಿನವರಿಗೆ ಈ ಲಸಿಕೆ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದೆ.
ಫೈಜರ್ ಲಸಿಕೆಯು ಎಲ್ಲ ವಯೋಮಾನ, ಎಲ್ಲಾ ಭೂಪ್ರದೇಶ ಹಾಗೂ ವಾತಾವರಣದಲ್ಲೂ ಏಕರೀತಿಯಲ್ಲೇ ಪರಿಣಾಮಕಾರಿಯಾಗಿದೆ. 65 ವರ್ಷಕ್ಕೂ ಮೇಲ್ಪಟ್ಟವರಲ್ಲೂ ಇದು ಶೇಕಡ 95ರಷ್ಟು ಪರಿಣಾಮಕಾರಿ ಎಂದು ಸಂಸ್ಥೆ ಹೇಳಿಕೊಂಡಿದೆ. ಪ್ರಸಕ್ತ ಲೆಕ್ಕಾಚಾರದ ಪ್ರಕಾರ 2020ರ ಅಂತ್ಯದೊಳಗೆ ಜಾಗತಿಕವಾಗಿ 5 ಕೋಟಿ ಫೈಜರ್ ಲಸಿಕೆಯ ಡೋಸ್‌ಗಳ ಉತ್ಪಾದನೆಯ ಗುರಿಯಿದ್ದು, 2021ರ ಅಂತ್ಯದೊಳಗೆ 130 ಕೋಟಿ ಡೋಸ್‌ಗಳನ್ನು ಉತ್ಪಾದಿಸುವ ಗುರಿ ತಮಗಿದೆ ಎಂದು ಫೈಜರ್ ಮತ್ತು ಬಯೋಎನ್‌ಟೆಕ್ ಹೇಳಿವೆ.