Connect with us

    LATEST NEWS

    ಕೋಸ್ಟ್ ಗಾರ್ಡ್ ಗೆ  ನೂತನ ಅತ್ಯಾಧುನಿಕ ಇಂಟರ್ಸೆಪ್ಟರ್ ಬೋಟ್

    ಕೋಸ್ಟ್ ಗಾರ್ಡ್ ಗೆ  ನೂತನ ಅತ್ಯಾಧುನಿಕ ಇಂಟರ್ಸೆಪ್ಟರ್ ಬೋಟ್

    ಮಂಗಳೂರು ಜನವರಿ 1 : ಕೋಸ್ಟ್ ಗಾರ್ಡ್ ಪಡೆಗೆ  ನೂತನ ಅತ್ಯಾಧುನಿಕ ಇಂಟರ್ಸೆಪ್ಟರ್ ಬೋಟ್ ಹಸ್ತಾಂತರಿಸಲಾಗಿದೆ. ಭಾರತೀಯ ಡಿಫೆನ್ಸ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಬಿಡಿಎಲ್ ಸಂಸ್ಥೆಯ ಭಾರತ್ ಮಂಗಳೂರು ಯಾರ್ಡ್ ನಲ್ಲಿ ತಯಾರಾದ ನೂತನ ಮಾದರಿಯ ಇಂಟರ್ ಸೆಪ್ಟರ್ ಬೋಟನ್ನು ಕೋಸ್ಟ್ ಗಾರ್ಡ್ ಗೆ ಹಸ್ತಾಂತರಿಸಲಾಗಿದೆ.

    ಈ ಇಂಟರ್ಸೆಪ್ಟರ್ ಬೋಟ್ ಫೆಬ್ರವರಿ 20 ರಿಂದ ಸಮುದ್ರದಲ್ಲಿ ಕಣ್ಗಾವಲು ಕಾರ್ಯಚರಣೆ ಗೆ ನಿರತವಾಗಲಿದೆ.ಈ ಬೋಟ್ 5-410 ಸರಣಿಯ ಈ ಇಂಟರ್ಸೆಪ್ಟರ್ ಬೋಟ್ ಆಗಿದ್ದು ಗಂಟೆಗೆ 35 ನಾಟಿಕಲ್ ಮೈಲ್ ಕ್ರಮಿಸುವ ಶಕ್ತಿ ಹೊಂದಿದೆ .ಅಪಾಯದಲ್ಲಿರುವ ಮೀನುಗಾರರ ರಕ್ಷಣೆ ಹಾಗೂ ಸಮುದ್ರ ಕಳ್ಳಸಾಗಾಣಿಕೆ ತಡೆ ಮತ್ತಿತರ ಕಾರ್ಯಾಚರಣೆಗೆ ಈ ಬೋಟ್ ಹೇಳಿ ಮಾಡಿಸಿದಂತಿದೆ.

    ಈ ಇಂಟರ್ಸೆಪ್ಟರ್ ಬೋಟ್ ಎರಡು ಪ್ರಬಲ ಇಂಜಿನ್ ಗಳನ್ನು ಹೊಂದಿದ್ದು ಅಲುಮಿನಿಯಂ ಹಾಲ್ ನಿಂದ ತಯಾರಿಸಲಾಗಿದೆ . 28 ಮೀ. ಉದ್ದ ಹಾಗು 60 ಟನ್ ಭಾರ ವಿರುವ ಈ ಇಂಟರ್ಸೆಪ್ಟರ್ ಬೋಟ್ 11 ಸಿಬ್ಬಂದಿಗಳನ್ನು ಗಸ್ತು ಕಾರ್ಯಕ್ಕೆ ಕೊಂಡೊಯ್ಯಲು ಸಮರ್ಥವಾಗಿದೆ .

    Share Information
    Advertisement
    Click to comment

    Leave a Reply

    Your email address will not be published. Required fields are marked *