Connect with us

    FILM

    ಕನ್ನಡದ ಬಿಗ್ ಬಾಸ್ ಗೆ ಬರಲಿದ್ದಾರಾ ನೂತನ ಸಾರಥಿ..ಕುತೂಹಲ ಹುಟ್ಟು ಹಾಕಿದ ಪ್ರೋಮೋ

    ಬೆಂಗಳೂರು ಸೆಪ್ಟೆಂಬರ್ 11: ಕನ್ನಡದ ಕಿರುತೆರೆ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಗೆ ಈ ಬಾರಿ ಹೊಸ ನಿರೂಪಕರು ಬರಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಸುದೀಪ್ ಅವರ ಹೇಳಿಕೆ ಬಳಿಕ ಇದೀಗ ಕಲರ್ಸ್ ಕನ್ನಡದ ಪ್ರೋಮೋದಲ್ಲೂ ಕೂಡ ಹೊಸ ನಿರೂಪಕರು ಬರಲಿದ್ದಾರಾ ಎಂಬ ಪ್ರಶ್ನೆ ಇಟ್ಟಿದೆ.


    ಕಳೆದ 10 ಸೀಸನ್‌ಗಳಲ್ಲಿ ನಟ ಕಿಚ್ಚ ಸುದೀಪ್‌ ಅವರೇ ನಿರೂಪಣೆ ನಡೆಸಿದ್ದರು. ಆದರೆ ಈ ಬಾರಿ ನಿರೂಪಕರ ಬದಲಾವಣೆಯಾಗಲಿದೆ ಎನ್ನುವ ಊಹಾಪೋಹಗಳ ನಡುವೆಯೇ ಹೊಸದೊಂದು ಪ್ರೋಮೊ ಬಿಡುಗಡೆಯಾಗಿದೆ.ಕಲರ್ಸ್‌ ಕನ್ನಡ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ, ಹೊಸ ದಶಕ, ಹೊಸ ಆಟ, ಹೊಸ ಅಧ್ಯಾಯ ಎನ್ನುವ ಶೀರ್ಷಿಕೆ ನೀಡಲಾಗಿದೆ. ಕೊನೆಯಲ್ಲಿ ಹೊಸ ನಿರೂಪಕರು ಬರಲಿದ್ದಾರಾ ಎಂದು ಪ್ರೇಕ್ಷಕರು ಅಚ್ಚರಿಯಿಂದ ಕೇಳುವುದನ್ನು ಕಾಣಬಹುದಾಗಿದೆ.

    ಬಿಗ್‌ ಬಾಸ್‌ 11ಕ್ಕೆ ಹೊಸ ನಿರೂಪಕರು ಬರಲಿದ್ದಾರೆ ಎನ್ನುವ ಸುದ್ದಿಗೆ ಈ ಪ್ರೊಮೊ ಪುಷ್ಟಿ ನೀಡಿದೆ. ಹೊಸ ನಿರೂಪಕರು ಯಾರಾಗಲಿದ್ದಾರೆ ಎನ್ನುವ ಕುತೂಹಲ ಗರಿಗೆದರಿದೆ. ಈ ತಿಂಗಳ ಅಂತ್ಯದಲ್ಲಿ ಬಿಗ್‌ ಬಾಸ್‌ ಕಾರ್ಯಕ್ರಮ ಆರಂಭವಾಗುವ ಸಾಧ್ಯತೆಯಿದೆ.

    Share Information
    Advertisement
    Click to comment

    You must be logged in to post a comment Login

    Leave a Reply