Connect with us

    LATEST NEWS

    ಇಸ್ರೇಲ್ ಪ್ರಧಾನಿಯನ್ನು ವಿಚಾರಣೆ ಇಲ್ಲದೆ ಗುಂಡಿಕ್ಕಿ ಕೊಲ್ಲುವ ಸಮಯ ಬಂದಿದೆ – ಕೇರಳದ ಕಾಂಗ್ರೆಸ್ ಸಂಸದ ರಾಜಮೋಹನ್ ಉಣ್ಣಿತ್ತಾನ್

    ಕಾಸರಗೋಡು ನವೆಂಬರ್ 18: ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ ಯುದ್ದ ಮುಂದುವರೆದಿದ್ದು, ಈ ಹಿಂದೆ ಕೇರಳದಲ್ಲಿ ಪ್ಯಾಲೆಸ್ತೀನ್ ಪರ ಬೃಹತ್ ಸಭೆಯನ್ನು ನಡೆಸಲಾಗಿತ್ತು, ಇದೀಗ ಕಾಂಗ್ರೇಸ್ ಸಂಸದರೊಬ್ಬರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ವಿಚಾರಣೆ ಇಲ್ಲದೆ ಗುಂಡಿಕ್ಕಿ ಕೊಲ್ಲುವ ಸಮಯ ಬಂದಿದೆ ಎಂದು ಕಾಂಗ್ರೇಸ್ ಸಂಸದ ಸಂಸದ ರಾಜಮೋಹನ್ ಉಣ್ಣಿತ್ತಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


    ಗಾಜಾ ಪಟ್ಟಿಯನ್ನು ಆಳುವ ಇಸ್ಲಾಮಿಕ್ ರೆಸಿಸ್ಟೆನ್ಸ್ ಮೂವ್ಮೆಂಟ್ ಹಮಾಸ್ ತಮ್ಮ ಭೂಮಿ, ಜನರು ಮತ್ತು ಜೀವಗಳನ್ನು ರಕ್ಷಿಸಲು ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡರು.”ಅವರು ಭಯೋತ್ಪಾದಕರಲ್ಲ, ಯಾರಾದರೂ ಹಮಾಸ್ ಅನ್ನು ಭಯೋತ್ಪಾದಕರು ಎಂದು ಬಿಂಬಿಸಿದರೆ, ಅವರಿಗೆ ತೀವ್ರವಾಗಿ ಪ್ರತಿಕ್ರಿಯಿಸಲು ಇದು ತಕ್ಕ ಸಮಯ ಎಂದು ಸಂಸದರು ಹೇಳಿದ್ದಾರೆ. ಕಾಸರಗೋಡು ನಗರ ಮತ್ತು ಸುತ್ತಮುತ್ತಲಿನ ಮಸೀದಿಗಳ ಒಕ್ಕೂಟ ಕಾಸರಗೋಡು ಯುನೈಟೆಡ್ ಮುಸ್ಲಿಂ ಜಮಾ-ಅತ್ ಶುಕ್ರವಾರ ಆಯೋಜಿಸಿದ್ದ ಫೆಲೆಸ್ತೀನ್ ಐಕ್ಯತಾ ರ‍್ಯಾಲಿ ಮತ್ತು ಪ್ರಾರ್ಥನಾ ಸಭೆಯಲ್ಲಿ ಸಂಸದರು ಈ ಮಾತುಗಳನ್ನಾಡಿದ್ದಾರೆ.

    ಲಕ್ಷಗಟ್ಟಲೆ ಜನರನ್ನು ಕೊಂದವರು ದೇಶಪ್ರೇಮಿಗಳು, ಆದರೆ ತಮ್ಮ ಸ್ವಂತ ಭೂಮಿಯನ್ನು ರಕ್ಷಿಸಿಕೊಳ್ಳಲು ಯಾರನ್ನಾದರೂ ಕೊಲ್ಲುವವರು ಉಗ್ರಗಾಮಿಗಳು, ಅವರು (ಹಮಾಸ್) ಉಗ್ರರಾಗಿದ್ದರೆ, ನಾವು ಪ್ರತಿಯೊಬ್ಬರೂ ಉಗ್ರಗಾಮಿಗಳೊಂದಿಗೆ ಇರುತ್ತೇವೆ” ಎಂದು ಉಣ್ಣಿತ್ತಾನ್ ಹೇಳಿದ್ದಾರೆ. ಈಗ, ಭಾರತದಲ್ಲಿ ಹುಟ್ಟಿದ್ದಕ್ಕೆ ನನಗೆ ನಾಚಿಕೆಯಾಗುತ್ತಿದೆ. ನಮ್ಮ ಪ್ರಧಾನಿಗೆ ಅಮೆರಿಕಾವನ್ನು ಬೆಂಬಲಿಸಲು ನಾಚಿಕೆಯಾಗುವುದಿಲ್ಲವೇ? ಇಂದು ಭಾರತೀಯ ಮೂಲದ ವ್ಯಕ್ತಿ ರಿಷಿ ಸುನಕ್ ಯುಕೆ ಪ್ರಧಾನಿಯಾಗಿದ್ದಾರೆ. ಆದರೆ ನಾನು ಅವರ ಬಗ್ಗೆ ನಾಚಿಕೆಪಡುತ್ತೇನೆ. ಭಾರತೀಯ ಪ್ರಧಾನಿಯವರು ಅಮೆರಿಕ ಮತ್ತು ಬ್ರಿಟನ್‌ನ ಸಾಮಂತರಾಗಲು ಒಪ್ಪಿಕೊಳ್ಳುವ ಮೂಲಕ ಭಾರತವನ್ನು ಅವಮಾನಿಸಿದ್ದಾರೆ ಎಂದು ಉಣ್ಣಿತ್ತಾನ್ ಹೇಳಿದ್ದಾರೆ.

    ಗಾಜಾದಲ್ಲಿ ನಡೆಯುತ್ತಿರುವ ಹತ್ಯಾಕಾಂಡವನ್ನು ತಡೆಯಲು ಅಂತಾರಾಷ್ಟ್ರೀಯ ಸಮುದಾಯ ಒಗ್ಗಟ್ಟಾಗಬೇಕು.ಇಸ್ಲಾಮಿಕ್ ಜಗತ್ತು ಒಟ್ಟುಗೂಡಿದರೆ, ಬೆಂಜಮಿನ್ ನೆತನ್ಯಾಹು ಅವರ ಒಂದು ಕಣವೂ ಸಿಗುವುದಿಲ್ಲ. ಆದರೆ ಅವರು ಶಾಂತಿಪ್ರಿಯ ಜನರು. ಅವರಿಗೆ ತಾಳ್ಮೆ ಮತ್ತು ಸ್ವಯಂ ಸಂಯಮವಿದೆ. ಅವರ ತಾಳ್ಮೆಯನ್ನು ಪದೇ ಪದೇ ಪರೀಕ್ಷಿಸಿದ ಕಾರಣ ಹಮಾಸ್ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡಿತು ಎಂದು ಕಾಸರಗೋಡು ಕ್ಷೇತ್ರದ ಸಂಸದರು ಹೇಳಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *