LATEST NEWS
ನೆದರ್ಲಂಡ್ ಬೆಡಗಿಯನ್ನು ಮದುವೆಯಾದ ಮಂಗಳೂರಿನ ಮುಸ್ಲಿಂ ಯುವಕ
ಮಂಗಳೂರು ಫೆಬ್ರವರಿ 04: ಮಂಗಳೂರಿನ ಮುಸ್ಲಿಂ ಯುವಕನೊಬ್ಬ ನೆದರ್ಲೆಂಡ್ ನ ಕ್ರಿಶ್ಚಿಯನ್ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ.ಪ್ರೀತಿ ಎಂಬ ಮಾಯೆಗೆ ಅಂತರವಿಲ್ಲ, ಭಾಷೆ ಬೇಕಿಲ್ಲ ಪ್ರೀತಿಸುವ ಮನಸ್ಸುಗಳಿದ್ದರೆ ಸಾಕು ಎನ್ನುವುದನ್ನು ಈ ಜೋಡಿ ತೋರಿಸಿಕೊಟ್ಟಿದ್ದಾರೆ.
ಯುವಕ ಮೂಲತಃ ಮಂಗಳೂರಿನವನಾಗಿದ್ದು ನೆದರ್ಲೆಂಡ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ನೆದರ್ಲಂಡ್ ಯುವತಿ ಜೊತೆ ಪ್ರೀತಿಯಾಗಿದ್ದು, ಬಳಿಕ ಇಬ್ಬರೂ ಪರಸ್ಪರ ಒಪ್ಪಿಕೊಂಡು ಮದುವೆಯಾಗಿದ್ದಾರೆ. ಮದುವೆ ಸುರತ್ಕಲ್ ನಲ್ಲಿ ನಡೆದಿದ್ದು, ನೆದರ್‌ಲೆಂಡ್ ಯುವತಿ ಮುಸ್ಲಿಂ ಸಂಪ್ರದಾಯದಂತೆಯೇ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಯುವತಿ ಕುಟುಂಬಸ್ಥರೂ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಈ ಸಂಭ್ರಮದ ವೀಡಿಯೋ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.