LATEST NEWS
ಶಾಂತಿಯುತ ಮತದಾನಕ್ಕೆ ಅಗತ್ಯ ಕ್ರಮ – ಪೊಲೀಸ್ ಕಮಿಷನರ್

ಶಾಂತಿಯುತ ಮತದಾನಕ್ಕೆ ಅಗತ್ಯ ಕ್ರಮ – ಪೊಲೀಸ್ ಕಮಿಷನರ್
ಮಂಗಳೂರು ಮೇ 8: ರಾಜ್ಯ ವಿಧಾನಸಭೆಗೆ ಮೇ 12 ರಂದು ನಡೆಯುವ ಮತದಾನದ ವೇಳೆ ಶಾಂತಿಯುತ ಮತದಾನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ವಿಫುಲ್ ಕುಮಾರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಗೆ ಒಳಪಡುವ 4 ವಿಧಾನಸಭಾ ಕ್ಷೇತ್ರಗಳಾದ ಮಂಗಳೂರು . ಮಂಗಳೂರು ಉತ್ತರ, ಮಂಗಳೂರು ದಕ್ಷಿಣ ಹಾಗೂ ಮೂಡಬಿದಿರೆ ವಿಧಾನಸಭಾ ಕ್ಷೇತ್ರಗಳ್ಲಲಿ ಒಟ್ಟು 877 ಬೂತ್ ಗಳಿದ್ದು, ಈ ಪೈಕಿ 676 ಬೂತ್ ಗ ಗಳನ್ನು ಕ್ಲಿಷ್ಟಕರ ಎಂದು ಗುರುತಿಸಲಾಗಿದೆ ಎಂದು ತಿಳಿಸಿದರು.

ಚುನಾವಣೆ ಹಿನ್ನಲೆ 26 ಚೆಕ್ ಪೋಸ್ಟ್ ಗಳನ್ನು ರಚಿಸಲಾಗಿದ್ದು, ಇದರಲ್ಲಿ 6 ಅಂತರ್ ರಾಜ್ಯ ಗಡಿಭಾಗದಲ್ಲಿದೆ, 14 ಪ್ಲೈಯಿಂಗ್ ಸ್ಕ್ವ್ಯಾಡ್ ಗಳು ಕಾರ್ಯನಿರ್ವಹಿಸುತ್ತಿದ್ದು, ಭದ್ರತೆಗಾಗಿ 11 ಸಿಎಪಿಎಫ್ ತುಕಡಿ, ಪಿಎಪಿ, ಹೋಂ ಗಾರ್ಡ್ ಸಹಿತ 2,700 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಚುನಾವಣೆಯ ಹಿನ್ನಲೆಯಲ್ಲಿ 1908 ಶಸ್ತ್ರಾಸ್ತ್ರ ಠೇವಣಿ ಇಡಲಾಗಿದ್ದು, 2756 ರೌಡಿಗಳ ಮೇಲೆ ಕಣ್ಗಾವಲು ಇಡಲಾಗಿದೆ, ಅಲ್ಲದೆ ಸಮಾಜಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತಹ 90 ಮಂದಿಯ ಮೇಲೂ ನಿಗಾ ಇಡಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.