Connect with us

    FILM

    ಧನುಷ್ ವಿರುದ್ದ ಲೇಡಿ ಸೂಪರ್ ಸ್ಟಾರ್ ಗರಂ – 3 ಸೆಕೆಂಡ್ ಗೆ 10 ಕೋಟಿ….!!

    ಚೆನ್ನೈ ನವೆಂಬರ್ 16: ದಕ್ಷಿಣಭಾರತದ ಲೇಡಿ ಸೂಪರ್ ಸ್ಟಾರ್ ನಯನತಾರಾ ತಮಿಳು ಚಿತ್ರರಂಗದ ಖ್ಯಾತ ನಟ ಧನುಷ್ ವಿರುದ್ದ ಇದೀಗ ಗರಂ ಆಗಿದ್ದು. ಧನುಷ್ ನೀಚ’, ಆತ ತುಂಬಾ ಕೀಳುಮಟ್ಟಕ್ಕೆ ಇಳಿದಿದ್ದಾರೆ: ಬಹಿರಂಗ ಪತ್ರದ ಮೂಲಕ ನಯನತಾರಾ ಕಿಡಿಕಾರಿದ್ದಾರೆ.


    ನಟಿ ನಯನತಾರಾ ತಮ್ಮ ಮದುವೆಯ ವಿಡಿಯೋ ವನ್ನು ನೆಟ್ ಪ್ಲಿಕ್ಸ್ ಗೆ 10 ಕೋಟಿಗೆ ಸೇಲ್ ಮಾಡಿದ್ದಾರೆ. ಆ ವಿಡಿಯೋದಲ್ಲಿ ತಾನು ನಟಿಸಿದ್ದ ಧನುಷ್ ನಿರ್ಮಾಣದ ನಾನು ರೌಡಿಧಾನ್ ಸಿನೆಮಾದ ಆಡಿಯೋ ಹಾಗೂ ಕೆಲವು ದೃಶ್ಯಗಳನ್ನು ಬಳಸಿದ್ದರು, ಇದರ ವಿರುದ್ದ ಧನುಷ್ ನಯನತಾರಾ ಅವರಿಗೆ 10 ಕೋಟಿ ಕಾಪಿರೈಟ್ ಕೇಸ್ ಹಾಕಿದ್ದಾರೆ. ಇದು ನಯನತಾರಾ ಕೋಪಗೊಳ್ಳುವಂತೆ ಮಾಡಿದೆ.

    ನಟಿಯ ಸಾಕ್ಷ್ಯಚಿತ್ರ ‘ನಯನತಾರಾ: ಬಿಯಾಂಡ್ ದಿ ಫೇರಿಟೇಲ್’ ನಲ್ಲಿ ಧನುಷ್ ಅವರ ಚಲನಚಿತ್ರ ‘ನಾನು ರೌಡಿ ಧಾನ್’ ನಿಂದ 3 ಸೆಕೆಂಡುಗಳ ಕ್ಲಿಪ್ಪಿಂಗ್ ಅನ್ನು ಬಳಸಿದ್ದಕ್ಕಾಗಿ ನಿರ್ಮಾಪಕರ ವಿರುದ್ಧ 10 ಕೋಟಿ ರೂಪಾಯಿಗಳ ಕಾಪಿರೈಟ್ ಪ್ರಕರಣವನ್ನು ದಾಖಲಿಸಲಾಗಿದೆ. ಇದಕ್ಕಾಗಿ ನಟಿ ಧನುಷ್‌ನಿಂದ ಅನುಮತಿ ಕೇಳಿದ್ದರೂ, ಅವರು ಅದನ್ನು ನಿರಾಕರಿಸಿದ್ದರು. ಈಗ ಅವರು ಚಿತ್ರದ ಕೆಲ ದೃಶ್ಯಗಳನ್ನು ಬಳಸಿದ್ದಕ್ಕಾಗಿ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.


    ಹಲವು ಬಾರಿ ಮನವಿ ಮಾಡಿದರೂ ನಾನು ರೌಡಿ ಧಾನ್ ಚಿತ್ರದ ಹಾಡು ಅಥವಾ ದೃಶ್ಯ ಕಟ್ ಮತ್ತು ಫೋಟೋಗಳನ್ನು ಬಳಸಲು ನೀವು ಅನುಮತಿ ನೀಡಲಿಲ್ಲ. ನಾವು ಕೂಡ ಇದಕ್ಕಾಗಿ ಬಹಳ ಸಮಯ ಕಾಯುತ್ತಿದ್ದೆವು ಎಂದು ನಟಿ ಬಹಿರಂಗ ಪತ್ರದಲ್ಲಿ ಬರೆದಿದ್ದಾರೆ. ಅವರ ಸಾಕ್ಷ್ಯಚಿತ್ರದಲ್ಲಿ ಬಳಸಲಾದ ದೃಶ್ಯಗಳನ್ನು ಜನರ ಫೋನ್‌ಗಳಲ್ಲಿ ಚಿತ್ರೀಕರಿಸಲಾಗಿದೆ ಮತ್ತು ನೀವು ಇದನ್ನು ಸಹ ಆಕ್ಷೇಪಿಸಿದ್ದೀರಿ ಎಂದು ಬರೆದಿದ್ದಾರೆ.

    ನೀವು ಅತ್ಯಂತ ಕೆಳಮಟ್ಟಕ್ಕೆ ಇಳಿದ್ದೀರಾ? ಇದು ನಿಮ್ಮ ಪಾತ್ರದ ಬಗ್ಗೆ ಏನನ್ನಾದರೂ ಹೇಳುತ್ತದೆ ಎಂದು ಅವರು ಬರೆದಿದ್ದಾರೆ. ಅವರ ಕಾನೂನು ನೋಟಿಸ್‌ಗೆ ತಕ್ಕ ಉತ್ತರ ನೀಡುವುದಾಗಿ ನಯನತಾರಾ ಹೇಳಿದ್ದಾರೆ. ನಿಮ್ಮ ಲೀಗಲ್ ನೋಟಿಸ್ ನನಗೆ ಬಂದಿದ್ದು, ಅದಕ್ಕೆ ಕಾನೂನು ರೀತಿಯಲ್ಲಿ ತಕ್ಕ ಉತ್ತರವನ್ನೂ ನೀಡುತ್ತೇವೆ ಎಂದು ನಟಿ ಬರೆದಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *