DAKSHINA KANNADA
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪ್ರತ್ಯಕ್ಷರಾದ ನಕ್ಸಲರು
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪ್ರತ್ಯಕ್ಷರಾದ ನಕ್ಸಲರು
ಪುತ್ತೂರು ಜನವರಿ 15: ದಕ್ಷಿಣಕನ್ನಡದಲ್ಲಿ ಮತ್ತೆ ನಕ್ಸಲರ ಚಟುವಟಿಕೆ ಆರಂಭವಾಗಿದೆ. ಈ ಹಿಂದೆ ಬಲ ಕಳೆದುಕೊಂಡಿದ್ದ ನಕ್ಸಲರು ಕೇರಳದತ್ತ ಪಲಾಯನ ಮಾಡಿದ್ದರು. ಆದರೆ ಇಂದು ಪುತ್ತೂರು ತಾಲೂಕಿನ ಅಡ್ಡಹೊಳೆ ಸಮೀಪ ಶಸ್ತ್ರ ಸಜ್ಜಿತ ನಕ್ಸಲ್ ತಂಡ ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಹಾಗೂ ಎಎನ್ ಎಫ್ ತಂಡ ಪುತ್ತೂರುನತ್ತ ತೆರಳಿದೆ.
ಪುತ್ತೂರಿನ ಅಡ್ಡಹೊಳೆ ಪ್ರದೇಶದಲ್ಲಿ ಮೂವರು ಸದಸ್ಯರಿದ್ದ ನಕ್ಸಲ್ ರ ತಂಡ ಪತ್ತೆಯಾಗಿದ್ದು, ಅಡ್ಡಹೊಳೆಯ ಸುರೇಶ್, ಲೀಲಾ ಅವರ ಮನೆಗೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗಿದ್ದು ಮೋಹನ್ ಎಂಬವರ ಮನೆಯಲ್ಲಿ ಊಟ ಸೇವಿಸಿ ಪಾರ್ಸೆಲ್ ಕೊಂಡು ಹೊಗಿದ್ದಾರೆ ಎಂದು ಹೇಳಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು , ಮೋಹನ್ ಅವರ ಮನೆಗೆ ತೆರಳಿ ತನಿಖೆ ನಡೆಸಿದ್ದಾರೆ.
ಪುತ್ತೂರು ಹಾಗೂ ಬೆಳ್ತಂಗಡಿ ಭಾಗದ ಅರಣ್ಯ ಪ್ರದೇಶದಲ್ಲಿ ಪೊಲೀಸರು ಈಗಾಗಲೇ ನಕ್ಸಲರಿಗಾಗಿ ಕೂಂಬಿಕ್ ಕಾರ್ಯಾಚರಣೆ ಆರಂಭಿಸಿದ್ದಾರೆ.
ಸ್ಥಳಕ್ಕೆ ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸುಧೀರ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.