LATEST NEWS
ವೈರಲ್ ಆದ ಉಡುಪಿ ನಿಟ್ಟೂರು ಬಳಿ ನಡೆದ ಅಪಘಾತದ ವಿಡಿಯೋ
ವೈರಲ್ ಆದ ಉಡುಪಿ ನಿಟ್ಟೂರು ಬಳಿ ನಡೆದ ಅಪಘಾತದ ವಿಡಿಯೋ
ಉಡುಪಿ ಜನವರಿ 15: ನಿನ್ನೆ ರಾಷ್ಟ್ರೀಯ ಹೆದ್ದಾರಿ 66 ಉಡುಪಿಯ ನಿಟ್ಟೂರು ಬಳಿ ನಡೆದ ರಸ್ತೆ ಅಪಘಾತದ ವಿಡಿಯೋ ಒಂದು ವೈರಲ್ ಆಗಿದೆ.
ನಿನ್ನೆ ಬೆಳಗ್ಗೆ ಸುಮಾರು 10.35ರ ಹೊತ್ತಿಗೆ ಬೈಕ್ನಲ್ಲಿ ಕುಳಿತಿದ್ದ ಮೂವರು ಸವಾರರು ನಿಟ್ಟೂರಿನ ಸಮೀಪದ ರಾಷ್ಟ್ರೀಯ ಹೆದ್ದಾರಿ ದಾಟುವ ಸಂದರ್ಭ ಈ ಘಟನೆ ನಡೆದಿದೆ. ಬೈಕ್ ನಲ್ಲಿ ರಸ್ತೆ ದಾಟುತ್ತಿರುವ ಸಂದರ್ಭದಲ್ಲಿ ಉಡುಪಿ ಕಡೆ ಸಾಗುತ್ತಿದ್ದ ಇನ್ನೊವಾ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ನಲಿದ್ದ ಮೂವರು ಸವಾರರು ಎಸೆಯಲ್ಪಟ್ಟಿದ್ದಾರೆ.
ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಮೂವರನ್ನು ಸ್ಥಳೀಯ ಆಸ್ಪತ್ರೆಗ ದಾಖಲಿಸಲಾಗಿದೆ. ಇನ್ನು ಕಾರು ಚಾಲಕ ಅಪಘಾತ ತಪ್ಪಿಸಲು ಪ್ರಯತ್ನಿಸಿದ್ದು ಬೈಕ್ ಗೆ ಡಿಕ್ಕಿ ಆದ ಇನ್ನೋವಾ ಕಾರು ನಂತರ ಲಾರಿಯೊಂದರ ಹಿಂಬಾಗಕ್ಕೆ ಡಿಕ್ಕಿ ಹೊಡೆದಿದೆ.
ಕಾರು ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ಗಂಭೀರವಾಗಿ ಗಾಯಗೊಂಡವರು ಕೊಡಂಕೂರು ನಿವಾಸಿಗಳಾಗಿದ್ದು ದೀಪಕ್, ಬಾಲು, ಅವಿನಾಶ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಉಡುಪಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
VIDEO
You must be logged in to post a comment Login