LATEST NEWS
ನಕ್ಸಲ್ ರಿಂದ ದೂರದರ್ಶನ ಸಿಬ್ಬಂದಿ ಹತ್ಯೆ ಹೆಚ್ಚು ಸುದ್ದಿಯಾಗಲಿಲ್ಲ – ವಿವೇಕ್ ಅಗ್ನಿಹೋತ್ರಿ

ನಕ್ಸಲ್ ರಿಂದ ದೂರದರ್ಶನ ಸಿಬ್ಬಂದಿ ಹತ್ಯೆ ಹೆಚ್ಚು ಸುದ್ದಿಯಾಗಲಿಲ್ಲ – ವಿವೇಕ್ ಅಗ್ನಿಹೋತ್ರಿ
ಮಂಗಳೂರು ನವೆಂಬರ್ 3: ತಮ್ಮದೇ ವೃತ್ತಿಯ ಸಿಬ್ಬಂದಿಯೊಬ್ಬರು ನಕ್ಸಲ್ ರಿಂದ ಹತ್ಯೆಯಾದಾಗಲೂ ಮಾಧ್ಯಮಗಳಲ್ಲಿ ಹೆಚ್ಚು ಸುದ್ದಿಯಾಗುವುದಿಲ್ಲ , ಕಾಶ್ಮೀರ ಉಗ್ರರಿಗಿಂತ ನಕ್ಸಲರಿಂದಲೇ ದೇಶದಲ್ಲಿ ಅತೀ ಹೆಚ್ಚು ಹತ್ಯೆಯಾಗಿದೆ ಎಂದು ಚಲನಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರು ಲಿಟ್ ಫೆಸ್ಟ್ ಅಂಗವಾಗಿ ನಗರದ ಡಾ. ಟಿಎಂಎ ಪೈ ಇಂಟರ್‌ನ್ಯಾಷನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ಶನಿವಾರ ಆರ್. ಜಗನ್ನಾಥನ್ ನಡೆಸಿದ ’ಅರ್ಬನ್ ನಕ್ಸಲ್ಸ್’ ಸಂವಾದದಲ್ಲಿ ಮಾತನಾಡಿದ ಅವರು, ನಕ್ಸಲರಿಂದಾಗುವ ಹತ್ಯೆಗಳು ಮಾಧ್ಯಮಗಳಲ್ಲಿ ಸುದ್ದಿಯಾಗವುದೇ ಇಲ್ಲ ಎಂದು ಅಭಿಪ್ರಾಯಪಟ್ಟರು.

ಯಾವುದೇ ಹೆತ್ತವರು ತಮ್ಮ ಮಕ್ಕಳಿಗೆ ದೇಶದ ವಿರುದ್ಧ ಮಾತನಾಡಲು ಹೇಳಿ ಕೊಡುವುದಿಲ್ಲ. ಆದರೆ ವಿಶ್ವವಿದ್ಯಾಲಯದಲ್ಲಿ ಓದಿದ ಕೆಲವರು ದೇಶದ ವಿರುದ್ಧ ಮಾತನಾಡುತ್ತಾರೆ ಎಂದರೆ ಸಮಸ್ಯೆಯ ಮೂಲ ಎಲ್ಲಿದೆ ಎನ್ನುವುದು ನಮಗೆ ಅರಿವಾಗುತ್ತದೆ ಎಂದರು.
ನಕ್ಸಲರಿಗೆ ಸುಲಿಗೆಯೇ ಪ್ರಮುಖ ಆದಾಯ. ಸಮಾಜ ಸೇವಕಿಯೆನ್ನುವ ಸೋಗಿನಲ್ಲಿ ಅರ್ಬನ್ ನಕ್ಸಲ್ ಮಹಿಳೆಯೊಬ್ಬರು ನಡೆಸುತ್ತಿರುವ ಎನ್‌ಜಿಒ ಶೇ.100ರಷ್ಟು ನಕ್ಸಲರಿಗಾಗಿಯೇ ಕೆಲಸ ಮಾಡುತ್ತಿದೆ.
ವಿಶ್ವದ ಹೆಚ್ಚಿನ ನಾಗರಿಕತೆಗಳು ನಾಶವಾಗಿವೆ. ಈಗ ಉಳಿದಿರುವುದು ಚೀನಾದ ನಾಗರಿಕತೆ ಮತ್ತು ಭಾರತದ ನಾಗರಿಕತೆ ಮಾತ್ರ. ನಮ್ಮದು ಸಾವಿರ ವರ್ಷಗಳ ಕಾಲ ಅಲ್ಪಸಂಖ್ಯಾತರಿಂದ ಆಳ್ವಿಕೆಗೊಳಪಟ್ಟ ಏಕೈಕ ದೇಶವಾಗಿದೆ. ಇಸ್ಲಾಮಿಕ್ ಮತ್ತು ಕಮ್ಯುನಿಸ್ಟ್ ಸಿದ್ದಾಂತದ ಮಧ್ಯೆ ನಾವಿದ್ದೇವೆ ಎಂದು ಅವರು ಹೇಳಿದರು.